main logo

ಲೈಂಗಿಕ ತೃಪ್ತಿಗಾಗಿ ಬಟನ್ ಬ್ಯಾಟರಿ ಸಿಕ್ಕಿಸಿಕೊಂಡು ಎಡವಟ್ಟು!

ಲೈಂಗಿಕ ತೃಪ್ತಿಗಾಗಿ ಬಟನ್ ಬ್ಯಾಟರಿ ಸಿಕ್ಕಿಸಿಕೊಂಡು ಎಡವಟ್ಟು!

ತೃಷೆಗಾಗಿ ಚಿತ್ರವಿಚಿತ್ರ ವಿಧಾನ ಅನುಸರಿಸಿದಾಗ ಆಗಿದ್ದೇನು
ಬ್ಯಾಟರಿಗಳು ಸಿಲುಕಿಕೊಂಡಿದ್ದು ಎಲ್ಲಿ

ಕಾನ್ಪೆರಾ: ಇತ್ತೀಚಿನ ದಿನಗಳಲ್ಲಿ ಲೈಂಗಿಕ ತೃಷೆಗಾಗಿ ಚಿತ್ರವಿಚಿತ್ರ ವಿಧಾನಗಳನ್ನು ಅನುಸರಿಸುತ್ತಿರುವುದು ಆಗಾಗ್ಗೆ ಕಂಡುಬರುತ್ತಿದೆ. ಅದೇ ರೀತಿ ಆಸ್ಟ್ರೇಲಿಯಾದ (Australia) ವೃದ್ಧನೊಬ್ಬ ತಾತ್ಕಾಲಿಕ ಲೈಂಗಿಕ ತೃಪ್ತಿ ಪಡೆಯಲು ಮಾಡಿಕೊಂಡ ಎಡವಟ್ಟಿನಿಂದ ಆಸ್ಪತ್ರೆಗೆ (Hospital) ದಾಖಲಾಗಿದ್ದಾನೆ.
ಹೌದು. 73 ವರ್ಷದ ವೃದ್ಧ ತನ್ನ ಲೈಂಗಿಕ ತೃಪ್ತಿಗಾಗಿ ಬಟನ್ ಶೈಲಿಯ ಬ್ಯಾಟರಿಗಳನ್ನು ತನ್ನ ಶಿಶ್ನಕ್ಕೆ ಅಳವಡಿಸಿಕೊಂಡಿದ್ದಾನೆ. ನಂತರ ಅದು ಶಿಶ್ನದಲ್ಲೇ ಸಿಕ್ಕಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ವೈದ್ಯರ ಮೊರೆಹೋಗಿದ್ದಾನೆ ಎಂದು ತಿಳಿದುಬಂದಿದೆ.

ಮೂತ್ರಶಾಸ್ತ್ರ ವೈದ್ಯಕೀಯ ಅಧ್ಯಯನ (Medical Study) ವರದಿ ಪ್ರಕಾರ, ಅಪರಿಚಿತ ವ್ಯಕ್ತಿಯು ಉದ್ದೇಶಪೂರ್ವಕವಾಗಿಯೇ ಶಿಶ್ನದ ಒಳಕ್ಕೆ ಬ್ಯಾಟರಿ ತಳ್ಳುವ ಮೂಲಕ ತಾತ್ಕಾಲಿಕ ಲೈಂಗಿಕ ತೃಪ್ತಿ ಅನುಭವಿಸಿದ್ದಾನೆ. ಈ ವೇಳೆ ಬ್ಯಾಟರಿಗಳು ಮೂತ್ರನಾಳದಲ್ಲೇ ಸಿಕ್ಕಿಕೊಂಡಿವೆ. ಇದು ಮೂತ್ರನಾಳ ನೈಕ್ರೋಸಿಸ್‌ನ ಮೊದಲ ಕೇಸ್ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ರೀತಿ ಲೈಂಗಿಕ ತೃಷೆಗಾಗಿ ಬಟನ್ ಬ್ಯಾಟರಿ ಅಳವಡಿಸಿಕೊಳ್ಳುವುದು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಶಿಶ್ನಕ್ಕೆ ಬಟನ್ ಬ್ಯಾಟರಿ ಸೇರಿಸಿದ ನಂತರ ನಿಧಾನವಾಗಿ ನೋವು ಕಾಣಿಸಿಕೊಳ್ಳುತ್ತದೆ. ಶಿಶ್ನದ ಮುಂಭಾಗದ ಮುಚ್ಚಿಕೊಳ್ಳಲು ಪ್ರಾರಂಭಿಸಿದ ನಂತರ ಮೂತ್ರ ವಿಸರ್ಜನೆ ವೇಳೆ ತೀವ್ರ ನೋವುಂಟಾಗುತ್ತದೆ. ದೇಹದಲ್ಲಿ ಆಯಾಸವಾಗುತ್ತದೆ, ಮೂತ್ರ ಕೋಶಗಳಲ್ಲಿ ಸಮಸ್ಯೆಯಾಗುತ್ತದೆ. ಈ ಲಕ್ಷಣಗಳು ಕಂಡುಬಂದ ನಂತರ ವ್ಯಕ್ತಿಯೂ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾನೆ.

ಬ್ಯಾಟರಿಯು ಸ್ವದೇಶಿತವಾಗಿ ನಿರ್ಮಿತವಾದುದ್ದಲ್ಲ, ಅದಲ್ಲಿ ಅನೇಕ ವಿದೇಶಿ ವಸ್ತುಗಳೂ ಇವೆ ಎಂದು ವ್ಯಕ್ತಿ ಒಪ್ಪಿಕೊಂಡಿದ್ದಾನೆ. ನಂತರ ವೈದ್ಯರು ಶಸ್ತçಚಿಕಿತ್ಸೆ ಮೂಲಕ ಅದನ್ನು ಹೊರತೆಗೆದಿದ್ದಾರೆ.
ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇಂತಹ ಯಡವಟ್ಟುಗಳನ್ನು ಮಾಡಿಕೊಳ್ಳುವುದರಿಂದ ಗ್ಯಾಂಗ್ರಿನ್ ಸಂಭವಿಸುವ ಸಾಧ್ಯತೆಯಿದೆ. ಮಾರಣಾಂತಿಕ ಕಾಯಿಲೆ ಸಂಭವಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!