Site icon newsroomkannada.com

ಸೇವಾ ನಿವೃತ್ತಿ ಹೊಂದಿದ ಲ್ಯಾನ್ಸಿ ಡಿ’ಸೋಜ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಮಂಗಳೂರು: ಇಲ್ಲಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾದ ಲ್ಯಾನ್ಸಿ ಡಿʼಸೋಜ ಅವರನ್ನು ಕೆಎಂಸಿಯ ನಿರ್ಮಾಣ ಹಾಗೂ ನಿರ್ವಹಣೆ ವಿಭಾಗದ ವತಿಯಿಂದ ಇತ್ತೀಚೆಗೆ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಆಡಳಿತ ಕಚೇರಿಯ ಮ್ಯಾನೇಜರ್ ಧರ್ಮೇಂದ್ರ ಎಂ.ಪಿ., ಹೆಚ್‌. ಆರ್.ವಿಭಾಗದ ಅಸಿಸ್ಟೆಂಟ್‌ ಮ್ಯಾನೇಜರ್‌ ಸತೀಶ್‌ ಶೆಟ್ಟಿ,  ಹಣಕಾಸು ವಿಭಾಗದ  ಅಸಿಸ್ಟೆಂಟ್‌ ಮ್ಯಾನೇಜರ್‌ಗಳಾದ  ಮಧುಮತಿ ಎಚ್.ಎಸ್‌., ಹೇಮಾವತಿ ಭಂಡಾರಿ, ಎಂಜಿನಿಯರ್ ಗಳಾದ ಶಿವರಾಜ್‌, ಹರಿಕೃಷ್ಣ ಆಳ್ವ, ಕಾರ್ಯನಿರ್ವಹಣಾಧಿಕಾರಿ ಭಾನುಕಲಾ ಉದಯ್‌, ಕಲಂದರ್‌ ಶಾಫಿ, ಸಂದೇಶ್‌ ಎ., ಯಶೋದಾ ಕೆ., ಶಿವರಾಮ್‌ ಎಸ್.‌, ಪುಂಡಲೀಕ ರಾವ್‌ ಮತ್ತಿತರರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

Exit mobile version