ಕೋಲ್ಕತ್ತಾ: ರೀಲ್ಸ್ ಅನ್ನೋ ಪದ ಈಗ ಭಾರೀ ಫೇಮಸ್ ಆಗಿಬಿಟ್ಟಿದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾವರು ಕೂಡ ಈ ರೀಲ್ಸ್ ಬಗ್ಗೆ ತಿಳಿದುಕೊಂಡಿದ್ದಾರೆ. ಇದೀಗ ಒರ್ವ ಮಹಿಳೆಗೆ ಈ ರೀಲ್ಸ್ ಹುಚ್ಚು ಜೀವವನ್ನೇ ತೆಗಿಸಿಬಿಟ್ಟಿದೆ.
ಅಪರ್ಣಾ ಎಂಬ ಮಹಿಳೆ ಇನ್‌ಸ್ಟಾಗ್ರಾಂನಲ್ಲಿ ಎರಡು ರೀಲ್ಸ್ ಪೋಸ್ಟ್ ಮಾಡಿದ್ದಳು. ಇದರಿಂದ ಸಿಟ್ಟಿಗೆದ್ದ ಪತಿ ಪರಿಮಳ್ ಬೈದ್ಯ ಆಕೆಗೆ ಯಾರೊಂದಿಗೂ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ್ದಾನೆ.
ತಕ್ಷಣ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.. 35 ವರ್ಷದ ಅಪರ್ಣಾ ಗೃಹಿಣಿಯಾಗಿದ್ದು, ಸಾಮಾಜಿಕ ಜಾಲತಾಣ ಗಳಲ್ಲೂ ಆಕ್ಟಿವ್ ಆಗಿದ್ದರು. ಪೋಸ್ಟ್ ಮಾಡಿದ ಇನ್‌ಸ್ಟಾಗ್ರಾಮ್ ರೀಲ್‌ಗಳ ಕುರಿತು ಗಂಡ-ಹೆಂಡತಿಯ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ನಂತರ ಇಬ್ಬರ ಮಧ್ಯೆ ಜಗಳ ಉಂಟಾಗಿದೆ. ಆರೋಪಿ ಪರಿಮಳ ಬೈದ್ಯ ತನ್ನ ಪತ್ನಿ ಅಪರ್ಣಾ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ಪರಿಮಳ್ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ದಂಪತಿಗೆ 7ನೇ ತರಗತಿಯಲ್ಲಿ ಕಲಿಯುವ ಒಬ್ಬ ಮಗ ಮತ್ತು ನರ್ಸರಿಯಲ್ಲಿ ಕಲಿಯುವ ಮಗಳಿದ್ದಾಳೆ.