Site icon newsroomkannada.com

ಎಸ್‌ ಡಿ ಎಂ ನಲ್ಲಿ ಶಿಕ್ಷಣ ಶಾಸ್ತ್ರ ಕಾರ್ಯಾಗಾರ

ಉಜಿರೆ: ಇಲ್ಲಿನ ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆ, (ಸಿ.ಬಿ.ಎಸ್.ಇ)ಯಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಕಿಂಡರ್‌ಗಾರ್ಟನ್ ಮತ್ತು ಪ್ರಾಥಮಿಕ ತರಗತಿಗಳಿಗೆ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಇಂಡಿಯಾದ ಪಠ್ಯಪುಸ್ತಕಗಳನ್ನು ಬೋಧಿಸಲಾಗುತ್ತಿದ್ದು, ಶನಿವಾರ ಶಿಕ್ಷಕರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.

“ಪೆಡಗೋಜಿ (ಶಿಕ್ಷಣ ಶಾಸ್ತ್ರ) ಮತ್ತು ಪಠ್ಯ ಬೋಧನೆ ” ಕುರಿತು ಸಂಪನ್ಮೂಲ ವ್ಯಕ್ತಿಯಾಗಿದ್ದ ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ಸ್ ಮ್ಯಾನೇಜರ್ ವಿದ್ಯಾ ನಾರಾಯಣನ್ ಶಿಕ್ಷಕರಿಗೆ ಪಠ್ಯ ಬೋಧನಾ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕ ಶ್ರೀ ಮನಮೋಹನ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಆಕ್ಸ್‌ಫರ್ಡ್ ಮಂಗಳೂರು ವಲಯ ಮ್ಯಾನೇಜರ್ ಸುಜಿತ್ ಉಪಸ್ಥಿತರಿದ್ದರು. ಶಿಕ್ಷಕಿ ನೀತು ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸುಮಾ ಶ್ರೀನಾಥ್ ಪ್ರಾರ್ಥನೆ ಹಾಡಿ ದರು. ಸ್ಮೃತಿ ಜೈನ್ ಅತಿಥಿಯನ್ನು ಪರಿಚಯಿಸಿದರು. ಮಮತಾ ಶೆಟ್ಟಿ ವಂದಿಸಿದರು.

Exit mobile version