ಶಿವಮೊಗ್ಗ: ಸರಕಾರ ತಲ್ವಾರ್ ಹಿಡಿದು ಮೆರವಣಿಗೆಗೆ ಅವಕಾಶ ಕೊಡುತ್ತಾರೆಂದರೆ ಮಾರಕಾಸ್ತ್ರ ಹಿಡಿದು ಹಿಂದು ಸಮಾಜದ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಸಹಕಾರ ಕೊಡುತ್ತಾರೆ. ನಮ್ಮಲ್ಲೂ ತಲ್ವಾರ್, ಶಸ್ತ್ರಾಸ್ತ್ರ ಇದೆ ಅಗತ್ಯ ಬಿದ್ದರೆ ಇದೇ ಶಸ್ತ್ರಾಸ್ತ್ರ ಮೂಲಕ ಪ್ರತಿಕ್ರಿಯೆ ಕೊಡಲು ಹಿಂದು ಸಮಾಜ ಸಿದ್ದವಿದೆ. ನವರಾತ್ರಿ ದಿನ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡ್ತೇವೆ. ಪ್ರತಿ ಮನೆಯಲ್ಲಿಯೂ ತಲ್ವಾರ್ ಗಳಿಗೆ ಪೂಜೆ ಮಾಡಬೇಕು. ಸ್ಕ್ಯೂಡ್ರೈವರ್, ಸ್ಯ್ಪಾನರ್ ಕೈ ಬಿಡಿ ತಲ್ವಾರ್ ಗಳಿಗೆ ಪೂಜೆ ಮಾಡಿ ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಹೇಳಿದರು.
ರಾಗಿಗುಡ್ಡಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ಮಾಡಲಾಗುತ್ತದೆ. ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿ ಬರುತ್ತದೆ ಎಂದು ಈ ಘಟನೆ ನಡೆದಿವೆ. ರೋಹನ್ ಎನ್ನುವ ಯುವಕನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ವಾಹನ ಜಖಂ ಆಗಿದೆ. ಶಿಕ್ಷಕರ ಮನೆಗೆ ನುಗ್ಗಿ ಮುಸ್ಲಿಂ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಘಟನೆ ಇಡಿ ನಾಗರಿಕ ಸಮುದಾಯ ತಲೆ ತಗ್ಗಿಸುವಂತಾಗಿದೆ ಎಂದರು.
ರಾಗಿಗುಡ್ಡದಲ್ಲಿ ಮತಾಂಧ ಸಮುದಾಯದಿಂದ ಘಟನೆಯಾಗಿದೆ. ಸಂತ್ರಸ್ತರಿಗೆ ಸಾಂತ್ವಾನ ಹೇಳಲು ಇಲ್ಲಿಗೆ ಆಗಮಿಸಿದ್ದೇನೆ. ಅವರ ಜೊತೆಗೆ ನಾವಿದ್ದೇವೆ. ಮುಸ್ಲಿಂ ಪುಷ್ಟೀಕರಣಕ್ಕೆ, ಮುಸ್ಲಿಂ ಮತಗಳನ್ನು ಓಲೈಸಲು ಸರಕಾರ ಮತಾಂಧ ಶಕ್ತಿಗೆ ಕುಮ್ಮಕ್ಕು ಕೊಡುತ್ತಿದೆ. ಇದು ಪೂರ್ವ ನಿಯೋಜಿತ ಕೃತ್ಯ ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಹೇಳಿದರು.
ತಲ್ವಾರ್ ಗಳಿಗೆ ಪೂಜೆ ಮಾಡಿ: ಅನೇಕ ರೀತಿಯ ದಾಳಿ, ನೋವು ಅಪಮಾನದ ನಡುವೆ ಹಿಂದೂ ಸಮಾಜ ರಕ್ಷಣೆ ಮಾಡಬೇಕಿದೆ. ಸರಕಾರ ತಲ್ವಾರ್ ಹಿಡಿದು ಮೆರವಣಿಗೆಗೆ ಅವಕಾಶ ಕೊಡುತ್ತಾರೆಂದರೆ ಮಾರಕಾಸ್ತ್ರ ಹಿಡಿದು ಹಿಂದು ಸಮಾಜದ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಸಹಕಾರ ಕೊಡುತ್ತಾರೆ. ನಮ್ಮಲ್ಲೂ ತಲ್ವಾರ್, ಶಸ್ತ್ರಾಸ್ತ್ರ ಇದೆ ಅಗತ್ಯ ಬಿದ್ದರೆ ಇದೇ ಶಸ್ತ್ರಾಸ್ತ್ರ ಮೂಲಕ ಪ್ರತಿಕ್ರಿಯೆ ಕೊಡಲು ಹಿಂದು ಸಮಾಜ ಸಿದ್ದವಿದೆ. ನವರಾತ್ರಿ ದಿನ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡ್ತೇವೆ. ಪ್ರತಿ ಮನೆಯಲ್ಲಿಯೂ ತಲ್ವಾರ್ ಗಳಿಗೆ ಪೂಜೆ ಮಾಡಬೇಕು. ಸ್ಕ್ಯೂಡ್ರೈವರ್, ಸ್ಯ್ಪಾನರ್ ಕೈ ಬಿಡಿ ತಲ್ವಾರ್ ಗಳಿಗೆ ಪೂಜೆ ಮಾಡಿ ಎಂದರು.
ಸರಕಾರ ತಕ್ಷಣ ಪರಿಹಾರ ಕೊಡಬೇಕು. ಹಾನಿಯಾಗಿರುವ ಮನೆಗಳಿಗೆ ಸಂಪೂರ್ಣ ಖರ್ಚು ಸರಕಾರ ಭರಿಸಬೇಕು. ಶಾಂತಿ ಸುವ್ಯವಸ್ಥೆ ನಡುವೆ ಬಹುಸಂಖ್ಯಾತರು ಬದುಕಲು ಕಷ್ಟ ಇದೆ. ಸರಕಾರ ಗಂಭೀರವಾದ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರ ಮೇಲೆಯೂ ಹಲ್ಲೆ ನಡೆದಿದೆ. ಪೊಲೀಸರ ಬಗ್ಗೆ ಗೌರವ ಇದೆ. ಸರಕಾರ ಪೊಲೀಸರ ಅಧಿಕಾರ ಹಸ್ತಕ್ಷೇಪ ಮಾಡುತ್ತಿದೆ. ಇಲಾಖೆಗೆ ಪಾರದರ್ಶಕವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು. ಸಮಾಜಕ್ಕೆ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆಗೆ ರಕ್ಷಣೆ ಕೊಡಬೇಕಾದ ಕೆಲಸ ಮಾಡದೇ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು ಎಂದು ಅರುಣ್ ಪುತ್ತಿಲ ಹೇಳಿದರು.