Site icon newsroomkannada.com

ಬಂಟ್ವಾಳ ನೇತ್ರಾವತಿ ನದಿ ಮಧ್ಯೆ ತೆಪ್ಪ ರಚಿಸಿ ದೀಪಾರಾಧನೆಯ ಬೆಳಕಿನಲ್ಲಿ ಸತ್ಯನಾರಾಯಣ ಪೂಜೆ

ಕರಸೇವೆಯಲ್ಲಿ ಎರಡು ಬಾರಿ ಪಾಲ್ಗೊಂಡಿದ್ದ ರಾಮಭಕ್ತರ ವಿಶಿಷ್ಟ ಸೇವಾ ಕಾರ್ಯ
ನದಿಯ ಮಧ್ಯೆ ಪೂಜೆ ನಡೆಯುವ ಜಾಗಕ್ಕೆ ಬಂದು ಪ್ರಸಾದ ತೆಗೆದುಕೊಳ್ಳುವ ವ್ಯವಸ್ಥೆ

ಮಂಗಳೂರು: ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆಯಂಗವಾಗಿ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಬಂಟ್ವಾಳದಲ್ಲಿ ನದಿಮಧ್ಯೆ ಸತ್ಯನಾರಾಯಣ ಪೂಜೆ ಮಾಡುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಾಲರಾಮ ಪ್ರಾಣಪ್ರತಿಷ್ಠೆಗೂ ಮುನ್ನ ಜನವರಿ 21ರಂದು ರಾಮಭಕ್ತರೊಬ್ಬರು ನೇತ್ರಾವತಿಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸುತ್ತಿದ್ದಾರೆ.

ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಹಾಗೂ ಅಯೋಧ್ಯೆ ಕರಸೇವೆಯಲ್ಲಿ ಎರಡು ಬಾರಿ ಪಾಲ್ಗೊಂಡಿದ್ದ ಬಂಟ್ವಾಳದ ಗೋವಿಂದ ಪ್ರಭು ಈ ಪೂಜೆ ಮಾಡಿಸುತ್ತಿದ್ದಾರೆ ಕರಸೇವೆಯಲ್ಲಿ ಎರಡು ಬಾರಿ ಪಾಲ್ಗೊಂಡಿದ್ದರೂ ಪ್ರಸ್ತುತ ಅಯೋಧ್ಯೆ ನೂತನ ಮಂದಿರದಲ್ಲಿ ಜ 22ರಂದು ಶ್ರೀರಾಮನ ಪಕ್ಷಿಣ ಪ್ರತಿಷ್ಠೆಯ ಸಂದರ್ಭ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಗೋವಿಂದ ಪ್ರಭು ಈ ಪೂಜೆ ಮಾಡಿಸುತ್ತಿದ್ದಾರೆ.

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬಳಿಯ ನೇತ್ರಾವತಿ ನದಿಯಲ್ಲಿ ಜ. 21ರ ರಾತ್ರಿ 7ರ ಬಳಿಕ ಈ ಪೂಜಾ ವಿಧಿಗಳು ನಡೆಯಲಿವೆ ನದಿಯ ನೀರಿನ ಮಧ್ಯೆ ತೆಪ್ಪದ ಮಾದರಿಯನ್ನು ರಚಿಸಿ ದೀಪಾರಾಧನೆಯ ಬೆಳಕಿನಲ್ಲಿ ಈ ಕಾರ್ಯಕ್ರಮ: ಆಯೋಜನೆಗೊಂಡಿದೆ ಗೋವಿಂದ ಪ್ರಭು ಅವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಜ. 22ರಂದು ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಹೀಗಾಗಿ ಅದರ ಮುಂಚಿನ ರಾತ್ರಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಪೂಜೆ ನಡೆಯುವ ಪಕ್ಕದಲ್ಲೇ ನದಿಯಲ್ಲಿ ಶ್ರೀರಾಮನ ವಿಗ್ರಹ ಆಂಜನೇಯನ ವಿಗ್ರಹಗಳು ಕೂಡ ಆಕರ್ಷಕವಾಗಿ ನಿರ್ಮಾಣಗೊಳ್ಳಲಿವೆ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಅವರಿಗಾಗಿ ದೇವಸ್ಥಾನ ಆವರಣದಲ್ಲಿ ನದಿ ಕಿನಾರೆಯ ಮೆಟ್ಟಿಲುಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ. ಪೂಜೆಯ ಬಳಿಕ ಎಲ್ಲರೂ ನದಿಯ ಮಧ್ಯೆ ಪೂಜೆ ನಡೆಯುವ ಜಾಗಕ್ಕೆ ಬಂದು ಪ್ರಸಾದ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಭಕ್ತರಿಗೆ ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಈಗಾಗಲೇ ನದಿಯ ಮಧ್ಯೆ ಸ್ಟೇಜ್ ರೀತಿಯ ಮಾದರಿ ರಚನೆಗೊಂಡಿದ್ದು ಉಳಿದ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ.

Exit mobile version