ಬಾಲಿವುಡ್ನಲ್ಲಿ ಬೇಡಿಕೆ ಸೃಷ್ಟಿ ಮಾಡಿಕೊಂಡಿರುವ ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ಇವರಿಬ್ಬರೂ ಜೊತೆಯಾಗಿ ‘ಕಾಫಿ ವಿತ್ ಕರಣ್ ಸೀಸನ್ 8’ ಶೋನಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದಾರೆ. ನಿರೂಪಕ ಕರಣ್ ಜೋಹರ್ ಅವರು ಈ ನಟಿಯರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಕೆಲವು ಇಂಟರೆಸ್ಟಿಂಗ್ ವಿಚಾರಗಳು ಹೊರಗೆ ಬಂದಿವೆ. ಅನನ್ಯಾ ಪಾಂಡೆ ಮತ್ತು ಸಾರಾ ಅಲಿ ಖಾನ್ ಅವರು ಒಬ್ಬನೇ ಹುಡುಗನ ಮೇಲೆ ಕಣ್ಣು ಹಾಕಿದ್ದರು ಎಂಬ ಮಾಹಿತಿ ಈಗ ಹೊರಬಿದ್ದಿದೆ.
ಚಿತ್ರರಂಗದಲ್ಲಿ ಯಾರ ಮೇಲೂ ನಾನು ಅಸಹಜವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ನೀನು ಇಷ್ಟಪಡುವ ಹುಡುಗನನ್ನು ನಾನು ನೋಡುವುದಿಲ್ಲ ಅಥವಾ ಆತನ ಜೊತೆ ನಾನು ಸಿನಿಮಾ ಮಾಡುವುದಿಲ್ಲ ಅಂತ ಬೇರೆಯವರು ಹೇಳಲಿ ಅಂತ ನಾನು ನಿರೀಕ್ಷಿಸಿಲ್ಲ’ ಎಂದು ಸಾರಾ ಅಲಿ ಖಾನ್ ಅವರು ಹೇಳಿದರು. ಆಗಲೇ ಅನನ್ಯಾ ಪಾಂಡೆ ಅವರು ಅಸಲಿ ವಿಚಾರ ಬಾಯಿ ಬಿಟ್ಟರು. ‘ಆ ಹುಡುಗನನ್ನು ನೋಡಿದರೆ ಹೊಡೆಯುತ್ತೇನೆ ಅಂತ ಸಾರಾ ನನಗೆ ಅನೇಕ ಬಾರಿ ಹೇಳಿದ್ದಾಳೆ’ ಎಂದರು ಅನನ್ಯಾ ಪಾಂಡೆ. ಆದರೆ ಈ ಹುಡುಗ ಯಾರು ಎಂಬುದನ್ನು ಮಾತ್ರ ಅವರು ಬಾಯಿ ಬಿಡಲಿಲ್ಲ. ಇನ್ನು ಆ ಹುಡುಗ ಯಾರೆಂಬುವುದು ಪ್ರಶ್ನೆ ಯಾಗೆ ಉಳಿದಿದೆ.
ಕಾಫಿ ವಿತ್ ಕರಣ್‘ ಶೋನಲ್ಲಿ ಖಾಸಗಿ ವಿಷಯಗಳ ಬಗ್ಗೆ ಮುಲಾಜಿಲ್ಲದೇ ಪ್ರಶ್ನೆ ಕೇಳಲಾಗುತ್ತದೆ. ಇದರಿಂದ ಅನೇಕ ಬಾರಿ ವಿವಾದ ಆಗಿದ್ದು ಕೂಡ ಉಂಟು. ಅದೇ ಕಾರಣಕ್ಕಾಗಿ ಕೆಲವರು ಈ ಶೋಗೆ ಬರಲು ಹಿಂದೇಟು ಹಾಕುತ್ತಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಕಾಣಿಸಿಕೊಂಡ ಎಪಿಸೋಡ್ ಕೂಡ ಸಾಕಷ್ಟು ಟ್ರೋಲ್ಗೆ ಒಳಗಾಗಿತ್ತು.