main logo

ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್‌ ರಾವ್‌ ಮತ್ತೆ ಆಧ್ಯಾತ್ಮದತ್ತ

ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್‌ ರಾವ್‌ ಮತ್ತೆ ಆಧ್ಯಾತ್ಮದತ್ತ

ಕಾರ್ಕಳ: ರಾಷ್ಟ್ರದೆಲ್ಲೆಡೆ ಸುದ್ದಿ ಮಾಡಿದ್ದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪಿ ಸಂತೋಷ್‌ ರಾವ್‌ ಇದೀಗ ಬಂಧಮುಕ್ತವಾಗಿದ್ದು, ಹಲವು ವರ್ಷಗಳ ವೇದನೆ, ಯಾತನೆಯ ಬದುಕಿನಿಂದ ಹೊರಬಂದು ಇದೀಗ ಅಧ್ಯಾತ್ಮಲೋಕದತ್ತ ಮುಖ ಮಾಡಿದ್ದಾರೆ.
ಎಲ್ಲಿದ್ದಾರೆ ಈಗ: ಸಂತೋಷ್‌ ರಾವ್‌ ಇದೀಗ ಆರೋಪಗಳಿಂದ ಮುಕ್ತರಾಗಿದ್ದು ಉಡುಪಿ ಜಿಲ್ಲೆ ಕಾರ್ಕಳದ ಅಯ್ಯಪ್ಪ ಸ್ವಾಮಿ ಮಂದಿರವೊಂದರಲ್ಲಿ ಸಹಾಯಕರಾಗಿ ದುಡಿಯುತ್ತಿದ್ದಾರೆ. ಈ ಬಗ್ಗೆ ಮಂದಿರದ ಸ್ಥಾಪಕ ಗುರುಸ್ವಾಮಿ ಮಾಹಿತಿ ಒದಗಿಸಿದ್ದಾರೆ.

ಸಂತೋಷ್‌ ತಂದೆ ಕೆಲವರ್ಷಗಳ ಹಿಂದೆ ದೇವರ ಬಗ್ಗೆ ಜಪ ಕಲಿಯುವ ಸಲುವಾಗಿ ದೇವಳಕ್ಕೆ ಬಂದಿದ್ದರು. ಆ ವೇಳೆ ತಂದೆಯೊಂದಿಗೆ ಸಂತೋಷ್‌ ಕೂಡ ಬಂದಿದ್ದರು. ತಂದೆ ಜಪಕಲಿತು ಇಲ್ಲಿಂದ ತೆರಳಿದ್ದರು. ಆದರೆ ಸಂತೋಷ್‌ ಇಲ್ಲಿಯೇ ತಂಗಿದ್ದು ಅಯ್ಯಪ್ಪ ಮಂದಿರದಲ್ಲಿ ಸಹಾಯಕರಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಆತನಿಗೆ ಬೀಡಿ ಸೇದುವ ಅಭ್ಯಾಸವೊಂದಿತ್ತು. ಈ ಕಾರಣದಿಂದ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ ಸ್ವಾಮಿಗಳೆಲ್ಲ ಸಂತೋಷ್‌ ಬೀಡಿ ಸೇದುವುದರಿಂದ ತೊಂದರೆಯಾಗುತ್ತದೆ ಎಂದು ಹೇಳಲು ಶುರು ಮಾಡಿದರು. ಆಗ ನಾನು ನೀನು ಬೀಡಿ ಸೇದುವ ಅಭ್ಯಾಸ ಬಿಡಬೇಕು. ಇಲ್ಲವೇ ಇಲ್ಲಿಂದ ಸ್ವಲ್ಪ ಸಮಯ ಹೊರಗಡೆ ಇರಬೇಕು ಎಂದು ಸೂಚಿಸಿದ್ದೆ. ಬಳಿಕ ಮಂದಿರದಿಂದ ತೆರಳಿದ್ದ ಸಂತೋಷ್‌ ಕುರಿತು ವಿಷಯ ಗೊತ್ತಾಗಿದ್ದು, ಸೌಜನ್ಯ ಪ್ರಕರಣದಲ್ಲಿ ಬಂಧನವಾದ ಬಳಿಕವಷ್ಟೇ ಎಂದು ತಿಳಿಸಿದ್ದಾರೆ. ಈಗ 11 ವರ್ಷದ ಬಳಿಕ ಆತ ಮತ್ತೆ ನಮ್ಮ ದೇವಳಕ್ಕೆ ಬಂದಿದ್ದು, ಇಲ್ಲಿ ಸೇವೆ ಮಾಡುತ್ತಿದ್ದಾನೆ ಎಂದು ತಿಳಿಸಿದ್ದಾರೆ.

Related Articles

error: Content is protected !!