main logo

ಸಾನಿಯಾಗೆ ಕೈಕೊಟ್ಟು ಪಾಕ್ ‘ನಟಿ’ ವಿವಾಹವಾದ ‘ಸೋಯೆಬ್ ಮಲಿಕ್’

ಸಾನಿಯಾಗೆ ಕೈಕೊಟ್ಟು ಪಾಕ್ ‘ನಟಿ’ ವಿವಾಹವಾದ ‘ಸೋಯೆಬ್ ಮಲಿಕ್’

ನವದೆಹಲಿ: ಭಾರತೀಯ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಪತಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ಬೇರ್ಪಡುತ್ತಿದ್ದಾರೆ ಎಂಬ ಮಾತುಗಳು ನಿಜವಾಗಿವೆ.

ಹೌದು, ಮೊದಲ ಪತ್ನಿ ಭಾರತದ ಸಾನಿಯಾ ಮಿರ್ಜಾಗೆ ಕೈಕೊಟ್ಟಿರುವ ಕ್ರಿಕೇಟಿಗ ಶೋಯೆಬ್ ಮಲಿಕ್ ಅವರು ಇದೀಗ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ. ಜನವರಿ 20 ರಂದು ಶನಿವಾರ ಅವರು ನಟಿಯನ್ನು ಮದುವೆ ಆಗಿರುವುದಾಗಿ ತಮ್ಮ ವಿವಾಹದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲವನ್ನು ಅಧಿಕೃತಪಡಿಸಿದ್ದಾರೆ.

ಮೊದಲಿಂದಲೂ ಶೋಯೆಬ್ ಮಲಿಕ್ ಮತ್ತು ನಟಿ ಸನಾ ಜಾವೇದ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಈ ಬಗ್ಗೆ ಕಳೆದ ವರ್ಷ ಶೋಯೆಬ್ ಹುಟ್ಟುಹಬ್ಬದಂದು ಪಾಕಿಸ್ತಾನದ ಕ್ರಿಕೆಟಿಗರು ಈ ಬಗ್ಗೆ ಮಾತನಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಶೋಯೆಬ್ ಗೆಳೆಯರು ಆತನ ಮತ್ತು ನಟಿಯ ಇಬ್ಬರ ಫೋಟೊಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಾಕಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು.

ಈ ಮಧ್ಯೆ ಸಾನಿಯಾ ಮಿರ್ಜಾರಿಂದ ಶೋಯೆಬ್ ದೂರವಾಗಲಿದ್ದಾರೆ. ಇವರಿಬ್ಬರು ಮಧ್ಯೆ ಎಲ್ಲವು ಸರಿಯಿಲ್ಲ. ಶೀಘ್ರವೇ ಡಿವೋರ್ಸ್ ನೀಡಲಿದ್ದಾರೆ ಎಂಬ ಮಾರುಗಳು ಕೇಳಿ ಬಂದಿದ್ದವು. ಈ ಎಲ್ಲ ಬೆಳವಣಿಗೆ ಮಧ್ಯೆ ಸೋಯೆಬ್ ಅವರು ಇಂದು ಶನಿವಾರ ಜನವರಿ 20 ರಂದು ಸ್ವದೇಶದ ನಟಿ ಸನಾ ಜಾವೇದ್ ಅವರ ಮದುವೆ ಆಗಿದ್ದು, ಆ ಸಮಾರಂಭದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!