main logo

ಎರಡನೇ ಮದುವೆಯಾಗಲು ರೆಡಿ ಆದ್ರ ನಟಿ ಸಮಂತಾ?: ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡ ಸ್ಟಾರ್ ನಟಿ

ಎರಡನೇ ಮದುವೆಯಾಗಲು ರೆಡಿ ಆದ್ರ ನಟಿ ಸಮಂತಾ?: ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡ ಸ್ಟಾರ್ ನಟಿ

ನಟ ನಾಗ ಚೈತನ್ಯ ಜೊತೆ ಡಿವೋರ್ಸ್ ಪಡೆದು ಸದ್ಯ ಒಂಟಿ ಜೀವನ ನಡೆಸುತ್ತಿರುವ ನಟಿ ಸಮಂತಾ ಎರಡನೇ ಮದುವೆ ಆಗಲು ಸಿದ್ಧರಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

ನಟಿ ಸಮಂತಾ ಕುಟುಂಬಸ್ಥರು ಒತ್ತಡ ಹೇರುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಒಂಟಿ ಜೀವನ ಬೇಡ ಎಂದು ಅನೇಕರು ಸ್ಯಾಮ್ಗೆ ಸಲಹೆ ಕೂಡ ಕೊಟ್ಟಿದ್ದಾರಂತೆ. ಆದ್ರೆ ಸ್ಯಾಮ್ ಗೆ 2ನೇ ಮದುವೆಯಾಗಲು ಮನಸ್ಸಿಲ್ಲವಂತೆ. ಆದರೆ ಕುಟುಂಬ ಸದಸ್ಯರ ಒತ್ತಡವನ್ನು ಸಹಿಸಲಾಗದೆ ಸಮಂತಾ ಭವಿಷ್ಯದ ಬಗ್ಗೆ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಒಂಟಿಯಾಗಿರುವ ಸ್ಯಾಮ್ ಭವಿಷ್ಯದಲ್ಲಿ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ನಟಿ ಸಮಂತಾ ಸದ್ಯ ಮೈಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದ ಕಾರಣ ಸ್ಯಾಮ್ ಕೆಲವು ತಿಂಗಳು ಸಿನಿಮಾಗಳಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಈಗ ಸಮಂತಾ ತನ್ನ ಆರೋಗ್ಯದ ಬಗ್ಗೆ ಸಂಪೂರ್ಣವಾಗಿ ಗಮನ ಹರಿಸುತ್ತಿದ್ದಾರೆ. ಅಪರೂಪದ ಕಾಯಿಲೆಯಾದ ಮೈಯೋಸಿಟಿಸ್ ಗೆ ಸಮಂತಾ ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿಯೇ ಚಿತ್ರಗಳಿಗೆ ಒಂದು ವರ್ಷ ಬ್ರೇಕ್ ನೀಡಲಾಗಿದೆ. ಜೊತೆಗೆ ಮಾನಸಿಕ ನೆಮ್ಮದಿಗಾಗಿ ಸ್ಯಾಮ್ ಫಾರಿನ್ ಟ್ರಿಪ್ ಮಾಡ್ತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!