Site icon newsroomkannada.com

KAYAKING SALIGRAMA PERAMPALLI ಸಾಲಿಗ್ರಾಮ ಪಾರಂಪಳ್ಳಿಯ ಕಯಾಕಿಂಗ್‌ ಲೋಕದ ಕಂಪ್ಲೀಟ್‌ ಡೀಟೈಲ್‌ ಇಲ್ಲಿದೆ

ಚೀನಾ ಕಪಿಮುಷ್ಟಿಯಲ್ಲಿರುವ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಭಾರತ ಕೊಕ್ಕೆ ಹಾಕಿದ ಬಳಿಕ ಉದ್ಯಮಪತಿಗಳು, ಕ್ರಿಕೆಟ್‌ ತಾರೆಯರು ಸೇರಿದಂತೆ ಗಣ್ಯರು ದೇಶೀಯ ಪ್ರವಾಸಿ ತಾಣಗಳನ್ನು ಹೆಸರಿಸಿ ಜಾಲತಾಣಗಳಲ್ಲಿ ಟ್ಯಾಗ್‌ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಅದೇ ರೀತಿ ಉಡುಪಿಯ ಮರವಂತೆ ಬೀಚ್‌ ಅನ್ನು ಹಲವು ಕ್ರಿಕೆಟಿಗರು ತಮ್ಮ ಎಕ್ಸ್‌ ಅಕೌಂಟ್‌ ನಲ್ಲಿ ಶೇರ್‌ ಮಾಡಿಕೊಂಡಿದ್ದರು. ನಮ್ಮ ದೇಶದಲ್ಲಿಯೇ ಮಾಲ್ಡೀವ್ಸ್‌ ಮೀರಿಸುವ ಜೀವಜಗತ್ತು, ಪ್ರಕೃತಿ ವಿಸ್ಮಯಗಳಿವೆ ಎಂದು ಬರೆದುಕೊಂಡಿದ್ದು, ದೂರದ ದೇಶಕ್ಕೆ ಹೋಗುವ ಬದಲಿಗೆ ಇಂತಹ ತಾಣಗಳಿಗೆ ಬನ್ನಿ ಎಂದು ಕರೆಕೊಟ್ಟಿದ್ದರು. ಅದೇ ರೀತಿ ನಮ್ಮ ಕರಾವಳಿಯ ಉಡುಪಿಯ ಸಾಲಿಗ್ರಾಮದ ಹಿನ್ನೀರಿನ ಕಯಾಕಿಂಗ್ ಮಸ್ತ ಮೋಜಿನ ಅನುಭವ ನೀಡುವ ಪ್ರದೇಶವಾಗಿದ್ದು, ಹಿತ ಮಿತದರದಲ್ಲಿ ಪ್ರವಾಸದ ಮೋಜು ಅನುಭವಿಸಬಹುದು.

ಸಾಲಿಗ್ರಾಮದ ಪಾರಂಪಳ್ಳಿ ಸೇತುವೆ ಬಳಿಯಿಂದ ಆರಂಭವಾಗುವ ಕಯಾಕಿಂಗ್ ಸೇತುವೆಯ ಕೆಳಗಿನಿಂದ ಹಿನ್ನಿರಿನಲ್ಲಿನ ದಟ್ಟ ಕಾಂಡ್ಲಾ ವನದ ನಡುವೆ ಸಂಚರಿಸಲಿದೆ. ಸುಮಾರು 2 ಗಂಟೆಯ ಈ ಪ್ರಯಾಣದಲ್ಲಿ ಕಾಂಡ್ಲಾ ಹಸಿರು ಪ್ರವಾಸಿಗರ ಕಣ್ಮಣ ಸೆಳೆಯಲಿದೆ. ಕಾಂಡ್ಲಾ ವನದ ಮಧ್ಯೆದಲ್ಲಿ ಕಯಾಕಿಂಗ್ ಯಾನ ಆರಂಭಿಸಿರುವುದು ಜಿಲ್ಲೆಯಲ್ಲಿ ಇದೇ ಮೊದಲು . ಇಲ್ಲಿನ ತರಬೇತುದಾರರು ಕೇವಲ 5 ರಿಂದ 10 ನಿಮಿಷದಲ್ಲಿ ಕಯಾಕಿಂಗ್ ನಡೆಸುವ ಕೌಶಲ್ಯಗಳನ್ನು ಕಲಿಯಲು ಅಗತ್ಯ ತರಬೇತಿ ನೀಡುತ್ತಾರೆ. ಪ್ರವಾಸಿಗರೇ ಸ್ವತಃ ದೋಣಿಗಳನ್ನು ನಡೆಸಬಹುದು ಕಯಾಕಿಂಗ್ ಗಾಗಿ ಇಲ್ಲಿ ಒಟ್ಟು 9 ದೋಣಿಗಳಿವೆ, ಪ್ರತಿ ದೋಣಿಗೆ ಇಬ್ಬರಂತೆ ಒಂದೇ ಸಮಯದಲ್ಲಿ ಒಟ್ಟು 12 ಜನ ಕಯಾಕಿಂಗ್ ಮಾಡಬಹುದು, 2 ದೋಣಿಯಲ್ಲಿ ತರಬೇತುದಾರರು ಜೊತೆಗಿರುತ್ತಾರೆ.ಪ್ರತಿದಿನ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಕಯಾಕಿಂಗ್ ಚಟುವಟಿಕೆ ನಡೆಯಲಿದೆ .ಇಲ್ಲಿನ ಹಿನ್ನೀರಿನಲ್ಲಿ ಅಪಾಯಕಾರಿಯಾಗುವಷ್ಟು ಆಳ ಇಲ್ಲದಿರುವುರಿಂದ ಎಲ್ಲಾ ವಯೋಮಾನದವರು ಕಯಾಕಿಂಗ್ ಮಾಡಬಹುದಾಗಿದೆ. ಎಲ್ಲಾ ರೀತಿಯ ಸುರಕ್ಷಾ ಕ್ರಮಗಳು, ಲೈಫ್ ಜಾಕೆಟ್ ಗಳು ಹಾಗೂ ನುರಿತ ತರಬೇತುದಾರರು ಜೊತೆಯಲ್ಲಿರುತ್ತಾರೆ. ಸ್ಥಳೀಯ ಯುವಕರಾದ ಮಿಥುನ್ ಕೋಡಿ ಮತ್ತು ಲೋಕೇಶ್ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದವರು ಸಾಲಿಗ್ರಾಮದ ಪಾರಂಪಳ್ಳಿ ಬ್ರಿಡ್ಜ್ ಬಳಿ, ಸೀತಾನದಿಯ ಹಿನ್ನಿರಿನ ಕಾಂಡ್ಲಾ ವನದಲ್ಲಿ ಕಯಾಕಿಂಗ್ ಚಟುವಟಿಕೆಗಳನ್ನು ಆರಂಭಿಸಿದ್ದು, ಪ್ರವಾಸಿಗರಿಗೆ, ಸಾಹಸ ಚಟುವಟಿಕೆ ಕೈಗೊಳ್ಳುವ ಆಸಕ್ತರಿಗೆ ಇದು ಅತ್ಯಂತ ಉತ್ತಮ ತಾಣ. ಮಾಹಿತಿಗೆ: +91 72592 77799

Exit mobile version