Site icon newsroomkannada.com

ಸಾಲೆತ್ತೂರು: ಇಬ್ಬರು ಯುವತಿಯರೊಂದಿಗೆ ಲೈಂಗಿಕ ಸಂಪರ್ಕ ನಡೆಸಿ ದೌರ್ಜನ್ಯ

ಬಂಟ್ವಾಳ: ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನ ಮೂಲಕ ಪರಿಚಯವಾದ ವ್ಯಕ್ತಿಯು ಇಬ್ಬರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದು, ಪೊಕ್ಸೋ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಸಾಲೆತ್ತೂರು ಮೂಲದ ಯುವತಿಯೊಬ್ಬಳಿಗೆ ಇಸ್ಟಾದಲ್ಲಿ ಹುಡುಗಿಯ ಹೆಸರಿನಲ್ಲಿ ಕೇರಳ ಮೂಲದ ಯುವಕ ಪರಿಚಯವಾಗಿದ್ದು, ಆತ್ಮೀಯತೆ ಬೆಳೆದು ದೈಹಿಕ ಸಂಬಂಧದ ಹಂತಕ್ಕೆ ತಲುಪಿದೆ. ಇದೇ ರೀತಿಯಲ್ಲಿ ಪಕ್ಕದ ಮನೆಯ ಯುವತಿಗೂ ಈ ವ್ಯಕ್ತಿಯ ಪರಿಚಯವಾಗಿದೆ. ಇಬ್ಬರು ಯುವತಿಯರು ತಮ್ಮ ವಿಚಾರ ಹಂಚಿಕೊಂಡಾಗ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕ ಒಬ್ಬನೇ ಎಂಬುದು ಬೆಳಕಿಗೆ ಬಂದಿದೆ.

ಇಬ್ಬರ ಜತೆಗೂ ದೈಹಿಕ ಸಂಪರ್ಕ ನಡೆಸಿದ ಯುವಕನ ವಿರುದ್ಧ ಕೆಲವು ದಿನಗಳ ಹಿಂದೆ ಯುವತಿ ಮನೆಯವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಅಪ್ರಾಪ್ತ ಓರ್ವ ಯುವತಿ ಗರ್ಭಿಣಿಯೆಂಬ ಮಾಹಿತಿ ಕೇಳಿ ಬರುತ್ತಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಪ್ರಕರಣದ ತನಿಖೆ ನಡೆಸಬೇಕಾಗಿದೆ.

Exit mobile version