ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ಧ ದೈವ ನರ್ತಕ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಧು ಪಾಣಾರ ಮಂಚಿಕೆರೆ ಅವರು ಅಲ್ಪಕಾಲದ ಅಸೌಖ್ಯದಿಂದ ಆ.12ರಂದು ನಿಧನ ಹೊಂದಿದರು.
ಉಡುಪಿ ಜಿಲ್ಲೆಯ ಅಲೆವೂರು ಗ್ರಾಮದ ಮಂಚಿಕೆರೆಯ ದೈವಾರಾಧಕ ಸಾಧು ಪಾಣಾರ ಅವರು ದಿ| ಜೋಗು ದಿ| ಕರ್ಗಿ ದಂಪತಿಯ ಪುತ್ರ. 68ರ ಹರೆಯದ ಅವರು 45 ವರ್ಷಗಳಿಂದ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದರು.
ಅವರ ಕಲಾ ಸೇವೆಯನ್ನು ಗುರುತಿಸಿ ಈಗಾಗಲೇ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ. ಸಾಧು ಪಾಣಾರ ಅವರು ಪತ್ನಿ ವಸಂತಿ ಪಾಣಾರ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪ್ರಸಿದ್ಧ ದೈವ ನರ್ತಕ ಸಾಧು ಪಾಣಾರ ನಿಧನ
