main logo

ಸಂಘನಿಕೇತನದಲ್ಲಿ ನಾಳೆ ಸಮನ್ವಯ ಬೈಠಕ್, ನಳಿನ್‌ ಗೆ ಲೋಕಸಭೆ ನೀಡುವ ಕುರಿತು ಚರ್ಚೆ ಸಾಧ್ಯತೆ

ಸಂಘನಿಕೇತನದಲ್ಲಿ ನಾಳೆ ಸಮನ್ವಯ ಬೈಠಕ್, ನಳಿನ್‌ ಗೆ ಲೋಕಸಭೆ ನೀಡುವ ಕುರಿತು ಚರ್ಚೆ ಸಾಧ್ಯತೆ
ಮಂಗಳೂರು: ಜೂ.26 ರಂದು ಮಂಗಳೂರಿನಲ್ಲಿ ಸಂಘ ಪರಿವಾರದ ಸಮನ್ವಯ ಬೈಠಕ್ ನಡೆಯಲಿದೆ.  ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಕುರಿತು ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಹಿಂದೂ ಸಂಘಟಕ ಅರುಣ್ ಕುಮಾರ್ ಪುತ್ತಿಲ ವಿಚಾರ ಕೂಡ ಸಭೆಯಲ್ಲಿ ಚರ್ಚೆಯಾಗಲಿದೆ. ಕ್ಯಾಪ್ಟನ್ ಬ್ರಿಜೇಶ್ ಚೌಟಗೆ ಲೋಕಸಭಾ ಟಿಕೆಟ್ ನೀಡುವ ಕುರಿತು ಇದೇ ವೇಳೆ ಮಾತುಕತೆ ನಡೆಯಲಿದೆ. ಮಂಗಳೂರಿನ ಸಂಘನಿಕೇತನದಲ್ಲಿ ಬೈಠಕ್ ನಡೆಯಲಿದ್ದು. ಬೈಠಕ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್   ಭಾಗಿಯಾಗಲಿದ್ದಾರೆ.
ಬಿಜೆಪಿ, ಸಂಘಪರಿವಾರ ಹಾಗೂ ಸಂಘಟನೆಗಳ ಸುಮಾರು ನೂರಕ್ಕೂ ಅಧಿಕ ಮಂದಿ ಬೈಠಕ್‌ನಲ್ಲಿ ಪಾಲ್ಗೊಳ್ಳಿದ್ದು, ನಾಳೆ ನಡೆಯುವ ಬೈಠಕ್‌ ಭಾರಿ ಮಹತ್ವ ಪಡೆದುಕೊಂಡಿದೆ. ಪುತ್ತೂರು ಸೇರಿದಂತೆ ಜಿಲ್ಲೆಯ ಬಿಜೆಪಿಯ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷ  ಕೈಗೊಳ್ಳಬೇಕಾದ ಬಗ್ಗೆ ತೀರ್ಮಾನದ ಬಗ್ಗೆಯೂ ಚರ್ಚೆ ನಡೆಯಲಿದೆ.
ಮುಖ್ಯವಾಗಿ ಪುತ್ತಿಲ ಪರಿವಾರ ಹಾಗೂ ಬ್ರಿಜೇಶ್ ಚೌಟ ವಿಚಾರವಾಗಿ ಚರ್ಚೆಯಾಗುವ ಸಾಧ್ಯತೆ ಇದೆ. ಅದಲ್ಲದೇ ಮತ್ತೆ ನಾಲ್ಕನೇ ಭಾರೀಗೆ ನಳೀನ್ ಕುಮಾರ್ ಗೆ ಟಿಕೆಟ್ ಕೊಡುವ ಬಗ್ಗೆಯೂ ಚರ್ಚೆ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

error: Content is protected !!