Site icon newsroomkannada.com

ಡೆತ್ ಸರ್ಟಿಫಿಕೇಟ್ ಗೆ 13 ಸಾವಿರ ರೂ. ಲಂಚ ಬೇಡಿಕೆ: ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ವಿಎ

Rs 13,000 for a death certificate. VA caught red-handed for demanding bribe

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಚೇಳ್ಳಾರು ಗ್ರಾಮದ ವ್ಯಕ್ತಿಯೊಬ್ಬನ ಅಜ್ಜನ ಡೆತ್ ಸರ್ಟಿಫಿಕೇಟ್ ಗೆ 13 ಸಾವಿರ ರೂಪಾಯಿ ಲಂಚ ಬೇಡಿಕೆಯಿಟ್ಟು ಲೋಕಾಯುಕ್ತರಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಘಟನೆ ವರದಿಯಾಗಿದೆ. ಮಂಗಳೂರು ತಾಲೂಕಿನ‌ ಸುರತ್ಕಲ್ ಗ್ರಾಮದ ವಿಎ ಯನ್ನು ಲೋಕಾಯುಕ್ತರು ಇದೀಗ ಬಂಧಿಸಿದ್ದಾರೆ.

ದೂರುದಾರರ ಅಜ್ಜನ ಡೆತ್ ಸರ್ಟಿಫಿಕೇಟ್ ಗೆ ಲಂಚದ ಬೇಡಿಕೆ‌ಯಿಟ್ಟ ಆರೋಪದ ಮೇಲೆ ಎಸ್ಪಿ ಸೈಮನ್, ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

Exit mobile version