main logo

ಬರ್ತಿದೆ ಮತ್ತೊಂದು ದೈವದ ಕಥೆ; ಕುತೂಹಲ ಮೂಡಿಸಿದ ರೂಪೇಶ್ ಶೆಟ್ಟಿ ನಟನೆಯ ‘ಅಧಿಪತ್ರ’ ಟೀಸರ್  

ಬರ್ತಿದೆ ಮತ್ತೊಂದು ದೈವದ ಕಥೆ; ಕುತೂಹಲ ಮೂಡಿಸಿದ ರೂಪೇಶ್ ಶೆಟ್ಟಿ ನಟನೆಯ ‘ಅಧಿಪತ್ರ’ ಟೀಸರ್  
‘ಕಾಂತಾರ’ ಸಿನಿಮಾದಲ್ಲಿ (Kantara Mivie) ದೈವದ ವಿಚಾರವನ್ನು ಮುಖ್ಯವಾಗಿ ಇಟ್ಟುಕೊಳ್ಳಲಾಗಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಮತ್ತೊಂದು ದೈವದ ಕಥೆಯುಳ್ಳ ಸಿನಿಮಾ ಮೂಡಿ ಬರುತ್ತಿದೆ. ರೂಪೇಶ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದು, ‘ಅಧಿಪತ್ರ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದು ಸಾಕಷ್ಟು ನಿರೀಕ್ಷೆ ಮೂಡಿಸಿದೆ.
‘ಈ ಊರಲ್ಲಿ ನಡೆಯುತ್ತಿರುವ ಘಟನೆ ನೋಡಿದರೆ ಇಲ್ಲಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಇದಕ್ಕೆಲ್ಲ ಆ ಗಗ್ಗರ ಬೆಟ್ಟದ ದೈವವೇ ಕಾರಣ’ ಎನ್ನುವ ಧ್ವನಿಯೊಂದಿಗೆ ‘ಅಧಿಪತ್ರ’ ಟೀಸರ್ ಆರಂಭ ಆಗಿದೆ. ಈ ಟೀಸರ್ ಸಾಕಷ್ಟು ಗಮನ ಸೆಳೆದಿದೆ. ‘ಬಿಗ್ ಬಾಸ್’ ಖ್ಯಾತಿಯ ರೂಪೇಶ್ ಶೆಟ್ಟಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ಕರಾವಳಿ ಭಾಗದಲ್ಲಿ ದೈವದ ಆರಾಧನೆ ಹೆಚ್ಚಿದೆ. ಇದೇ ಕಥೆಯನ್ನು ‘ಅಧಿಪತ್ರ’ ಸಿನಿಮಾದಲ್ಲೂ ಇದೆ. ಕರಾವಳಿ ಭಾಗದ ವಿಶೇಷ ಆಚರಣೆಗಳಾದ ಆಟಿ ಕಳಂಜಾ, ಯಕ್ಷಗಾನ, ಹುಲಿ ಕುಣಿತದ ವಿಚಾರಗಳನ್ನು ತೋರಿಸಲಾಗಿದೆ. ರೂಪೇಶ್ ಶೆಟ್ಟಿ ಅವರು ಪೊಲೀಸ್ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ. ಚಯನ್ ಶೆಟ್ಟಿ ಅವರಿಗೆ ನಿರ್ದೇಶನದಲ್ಲಿ ಇದು ಮೊದಲ ಅನುಭವ. ಮೊದಲ ಪ್ರಯತ್ನದಲ್ಲಿಯೇ ಅವರು ಗಮನ ಸೆಳೆದಿದ್ದಾರೆ.
‘ಕಾಂತಾರ’ ಸಿನಿಮಾದಲ್ಲಿ ಪ್ರಕಾಶ್ ತುಮಿನಾಡು ಅವರು ಮುಖ್ಯ ಪಾತ್ರ ಮಾಡಿದ್ದರು. ಈ ಚಿತ್ರದಲ್ಲೂ ಅವರು ನಟಿಸಿದ್ದಾರೆ. ಎಂ.ಕೆ.‌ ಮಠ, ರಘು ಪಾಂಡೇಶ್ವರ್, ದೀಪಕ್ ರೈ, ಅನಿಲ್ ಉಪ್ಪಾಲ್, ಕಾರ್ತಿಕ್ ಭಟ್, ಪ್ರಶಾಂತ್, ಜಾಹ್ನವಿ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಕೆ. ಆರ್. ಸಿನಿಕಂಬೈನ್ಸ್ ಬ್ಯಾನರ್‌ ಅಡಿಯಲ್ಲಿ‌ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ‘ಅಧಿಪತ್ರ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಚಿತ್ರದ ಸಹ ನಿರ್ಮಾಪಕರು. ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿದೆ. ಶೀಘ್ರವೇ ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಆಗಲಿದೆ.

 

Related Articles

Leave a Reply

Your email address will not be published. Required fields are marked *

error: Content is protected !!