Site icon newsroomkannada.com

ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ ಆರೋಪ: ಎಲ್ವಿಶ್ ಬಂಧನ

ನವದೆಹಲಿ, ಮಾರ್ಚ್ 17: ರೇವ್ ಪಾರ್ಟಿಯೊಂದರಲ್ಲಿ ಹಾವಿನ ವಿಷದ (snake venom) ವ್ಯವಸ್ಥೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಲ್ವಿಶ್ ಯಾದವ್ (Elvish Yadav) ಅವರನ್ನು ಪೊಲೀಸರು ಬಂಧಿಸಿದ್ದಾರೆ. ವನ್ಯಜೀವಿ ಕಾಯ್ದೆ (wildlife act) ಅಡಿಯಲ್ಲಿ ನೋಯ್ಡಾದಲ್ಲಿ ಎಲ್ವಿಶ್ ಯಾದವ್ ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ವಾರ ನಡೆದ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಇವರು ವ್ಯವಸ್ಥೆ ಮಾಡಿದರೆಂದು ಆರೋಪಿಸಲಾಗಿದೆ.
ಪೊಲೀಸರು ಈ ಪ್ರಕರಣ ಸಂಬಂಧ ನವೆಂಬರ್ 3ರಂದು ನೋಯ್ಡಾದ ಸೆಕ್ಟರ್ 51ರಲ್ಲಿ ಬಾಂಕ್ವೆಟ್ ಹಾಲ್​ವೊಂದರಲ್ಲಿ ದಾಳಿ ಮಾಡಿ ಐವರನ್ನು ಬಂಧಿಸಿದ್ದರು. ಅವರ ಪೈಕಿ ನಾಲ್ವರು ಹಾವಾಡಿರಾಗಿದ್ದರು. ಈ ದಾಳಿಯಲ್ಲಿ ಒಂಬತ್ತು ಹಾವುಗಳು ಹಾಗೂ ಅವುಗಳ ವಿಷವನ್ನು ಪೊಲೀಸರು ಜಫ್ತಿ ಮಾಡಿದ್ದರು. ಹಾವಿ ವಿಷವನ್ನು ಮತ್ತೇರಿಸಲು ಬಳಸಲಾಗುತ್ತದೆ. ರೇವ್ ಪಾರ್ಟಿಗಳಲ್ಲಿ ಇತರ ಮಾದಕ ವಸ್ತುಗಳ ಜೊತೆ ಹಾವಿನ ವಿಷ ಕೂಡ ಬಳಸಬಹುದು.

ಈ ಪ್ರಕರಣದಲ್ಲಿ ಬಂಧಿತರಾದವರಲ್ಲಿ ಎಲ್ವಿಶ್ ಯಾದವ್ ಆರನೆಯರು. ಬಿಗ್ ಬಾಸ್ ಒಟಿಟಿಯ ಕಳೆದ ಬಾರಿಯ ಸೀಸನ್​ನಲ್ಲಿ ಎಲ್ವಿಶ್ ಯಾದವ್ ವಿಜೇತರಾಗಿದ್ದಾರೆ. ರೇವ್ ಪಾರ್ಟಿಗಳಲ್ಲಿ ಎಲ್ವಿಶ್ ಯಾದವ್ ಹಾವುಗಳನ್ನು ಬಳಸಿ ವಿಡಿಯೋ ಶೂಟ್ ಕೂಡ ಮಾಡಿದ್ದರೆನ್ನಲಾಗಿದೆ. ಖ್ಯಾತ ಯೂಟ್ಯೂಬರ್ ಕೂಡ ಆಗಿರುವ ಎಲ್ವಿಶ್ ತನ್ನ ಚಾನಲ್​ನ ಹಲವು ವಿಡಿಯೋಗಳಿಗೆ ಹಾವನ್ನು ಬಳಸಿಕೊಂಡಿದ್ದಾರೆ.

ಎಲ್ವಿಶ್ ಯಾದವ್ ಅವರ ಯೂಟ್ಯೂಬ್ ವಿಡಿಯೋಗಳಲ್ಲಿ ಹಾವುಗಳನ್ನು ಬಳಸಿಕೊಂಡಿರುವುದು ಅವರನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸಲು ಕಾರಣವಾಗಿದೆ. ಮನೇಕಾ ಗಾಂಧಿ ನೇತೃತ್ವದ ಪೀಪಲ್ ಫಾರ್ ಅನಿಮಲ್ಸ್ ಎಂಬ ಪ್ರಾಣಿ ಹಕ್ಕು ಗುಂಪು ಅನಾಮಧೇಯರಾಗಿ ಎಲ್ವಿಶ್ ಯಾದವ್ ಅವರಿಗೆ ಕರೆ ಮಾಡಿ ತಮಗೆ ಹಾವುಗಳು ಹಾಗೂ ಅವುಗಳ ವಿಷ ಬೇಕು ಎಂದು ಫೋನ್​ನಲ್ಲಿ ಕೇಳಿದ್ದಾರೆ. ಆಗ ಎಲ್ವಿಶ್ ಯಾದವ್ ಅವರು ರಾಹುಲ್ ಎಂಬಾತನ ನಂಬರ್ ಕೊಟ್ಟಿದ್ದಾರೆ. ನೋಯ್ಡಾ ಸೆಕ್ಟರ್ 51ರಲ್ಲಿನ ಬ್ಯಾಂಕ್ವೆಟ್​ವೊಂದಕ್ಕೆ ಬರಲು ರಾಹುಲ್ ತಿಳಿಸಿದ್ದಾನೆ.

ಪ್ರಾಣಿ ಹಕ್ಕು ತಂಡದವರು ಆ ಬಾಂಕ್ವೆಟ್ ಹಾಲ್​ಗೆ ಹೋದಾಗ ಅಲ್ಲಿ ನಾಲ್ವರು ಹಾವಾಡಿಗರು, ಒಂಬತ್ತು ಹಾವು ಮತ್ತು 20ಎಂಲ್ ಹಾವಿನ ವಿಷ ಸಂಗ್ರಹ ಇದ್ದದ್ದು ತಿಳಿಯುತ್ತದೆ. ಕೂಡಲೇ ಈ ತಂಡದ ಸದಸ್ಯರು ನೋಯ್ಡಾ ಪೊಲೀಸ್​ನ ತಂಡಕ್ಕೆ ಕರೆ ಮಾಡಿ ತಿಳಿಸುತ್ತದೆ. ತತ್​ಕ್ಷಣವೇ ಬರುವ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ, ಐವರನ್ನು ಬಂಧಿಸುತ್ತಾರೆ.

Exit mobile version