Site icon newsroomkannada.com

ರಶ್ಮಿಕಾ ಮಂದಣ್ಣ ಡೀಪ್​ ಫೇಕ್​ ವಿಡಿಯೋ ವೈರಲ್ ಬೆನ್ನಲ್ಲೇ ಮತ್ತೊಂದು ವಿಡಿಯೋ ಪೋಸ್ಟ್‌

Rashmika Mandanna's deep fake video goes viral

ನಟಿ ರಶ್ಮಿಕಾ ಮಂದಣ್ಣರ ಡೀಪ್​ ಫೇಕ್​ ವಿಡಿಯೋ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು.ಈ ಬಗ್ಗೆ ಕೇಂದ್ರದಿಂದಲೂ ಎಚ್ಚರಿಕೆಯನ್ನು ಸೂಚಿಸಲಾಗಿತ್ತು. ಇದೀಗ ಅದರ ಬೆನ್ನಲ್ಲೇ ಅವರದ್ದೇ ಮತ್ತೊಂದು ಡೀಪ್​ ಫೇಕ್​ ವಿಡಿಯೋ ವೈರಲ್​ ಆಗುತ್ತಿದೆ. ಅ.23ರಂದೇ ವಿಡಿಯೋ ಪೋಸ್ಟ್​ ಮಾಡಲಾಗಿದೆ. ಮತ್ತೆ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.

ಕೆಲವು ದಿನಗಳ ಹಿಂದೆ ಝರಾ ಪಟೇಲ್ ಎಂಬಾಕೆಯ ಒರಿಜಿನಲ್​ ವಿಡಿಯೋಗೆ ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ರಶ್ಮಿಕಾ ಮುಖವನ್ನು ಎಡಿಟ್​ ಮಾಡಿ ಹರಿಬಿಟ್ಟಿದ್ದರು.ಇದು ಎಲ್ಲಡೆ ವೈರಲ್​ ಆಗಿ, ಸಾಕಷ್ಟು ಚರ್ಚೆಯಾಗುತ್ತಿದ್ದು, ರಶ್ಮಿಕಾ ಗಮನಕ್ಕೂ ಬಂದಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ. ಇದೊಂದು ಆಘಾತಕಾರಿ ಬೆಳವಣಿಗೆಯಾಗಿದ್ದು, ಅನೇಕ ಗಣ್ಯ ವ್ಯಕ್ತಿಗಳು ಇದನ್ನು ಖಂಡಿಸಿದ್ದಾರೆ. ಇದು ಕೇಂದ್ರ ಸರ್ಕಾರದ ಗಮನಕ್ಕೂ ಬಂದಿದ್ದು, ಸಾಮಾಜಿಕ ಜಾಲತಾಣ ಬಳಸುವವರಿಗೆ ಕೆಲವೊಂದು ಕಾನೂನು ನಿಯಮಗಳ ಎಚ್ಚರಿಕೆಯನ್ನು ನೀಡಿದೆ.ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಕನ್ನಡಿ ಮುಂದೆ ನಿಂತು ತನ್ನನ್ನು ನೋಡುತ್ತಿರುವ ಯುವತಿಯ ಮುಖಕ್ಕೆ ಡೀಪ್​ ಫೇಕ್​ ಟೆಕ್ನಾಲಜಿ ಮೂಲಕ ರಶ್ಮಿಕಾ ಮುಖವನ್ನು ಎಡಿಟ್​ ಮಾಡಲಾಗಿದೆ. ಕ್ರಶ್​ ಮಿಕಾ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅ.23ರಂದು ವಿಡಿಯೋ ಪೋಸ್ಟ್​ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Exit mobile version