Site icon newsroomkannada.com

ಟರ್ಕಿ ಟ್ರಿಪ್‌ ಫೋಟೋ ಪೋಸ್ಟ್​ ಮಾಡಿ ಸಿಕ್ಕಿಬಿದ್ರಾ ರಶ್ಮಿಕಾ ಮಂದಣ್ಣ: ನಿಜಕ್ಕೂ ಅಲ್ಲಿ ನಡೆದಿದ್ದೇನು?

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿಯ ಜೋಡಿಹಕ್ಕಿಗಳು ಎಂಬ ಸುದ್ದಿ ಹಲವು ವರ್ಷದಿಂದ ಹರಿದಾಡುತ್ತಿದೆ. ಇಬ್ಬರು ಒಟ್ಟಾಗಿ ತಿರುಗಾಡುತ್ತಿರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ಫ್ಯಾನ್ಸ್‌ ವಲಯದಲ್ಲಿ ಭಾರಿ ಚರ್ಚೆಯೂ ನಡೆಯುತ್ತಿರುತ್ತದೆ. ಇಬ್ಬರೂ ಒಂದೇ ಸ್ಥಳಕ್ಕೆ ತೆರಳಿದರೂ ಬೇರೆ ಬೇರೆ ದಿನ ಫೋಟೋಗಳನ್ನು ಪೋಸ್ಟ್‌ ಮಾಡುತ್ತಾರೆ. ಅದೇ ರೀತಿ ಈಗ ರಶ್ಮಿಕಾ ಮಂದಣ್ಣ ಅವರನ್ನು ಅಭಿಮಾನಿಗಳು ಸಾಕ್ಷಿ ಸಮೇತ ಹಿಡಿದಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಟರ್ಕಿಯಲ್ಲಿ ಸುತ್ತಾಟ ನಡೆಸುತ್ತಿದ್ದರು ಎನ್ನಲಾಗಿದೆ.

ಗೀತ ಗೋವಿಂದಂ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಾಗಿ ನಟಿಸಿದರು. ಆ ಬಳಿಕ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಮತ್ತೆ ತೆರೆ ಹಂಚಿಕೊಂಡರು. ಇವರ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಗಿದೆ. ಇವರು ಒಟ್ಟಾಗಿ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ವಿಜಯ್ ಹಾಗೂ ರಶ್ಮಿಕಾ ಲಿವ್ ಇನ್ ರಿಲೇಶನ್​ಶಿಪ್​ನಲ್ಲಿದ್ದಾರೆ ಎಂಬುದಕ್ಕೆ ಹಲವು ಸಾಕ್ಷ್ಯಗಳು ಸಿಕ್ಕಿವೆ. ಆದರೆ, ಈ ವಿಚಾರವನ್ನು ಅವರು ಒಪ್ಪಿಕೊಳ್ಳುತ್ತಿಲ್ಲ.
ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಪೋಸ್ಟ್​ ಮಾಡಿದ್ದಾರೆ. ಸುತ್ತಾಟವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ. ಅವರು ಕ್ಲಿಕ್ಕಿಸಿಕೊಂಡ ಫೋಟೋದ ಬ್ಯಾಕ್​ಗ್ರೌಂಡ್ ವಿಜಯ್ ದೇವರಕೊಂಡ ಟರ್ಕಿಯಿಂದ ಪೋಸ್ಟ್ ಮಾಡಿದ್ದ ಫೋಟೋ ಜೊತೆ ಸಾಮ್ಯತೆ ಹೊಂದಿದೆ.

ವಿಜಯ್ ದೇವರಕೊಂಡ ನಟನೆಯ ‘ಖುಷಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಶೂಟಿಂಗ್​ ಟರ್ಕಿಯಲ್ಲಿ ನಡೆದಿತ್ತು. ವಿಜಯ್ ಸ್ವಲ್ಪ ದಿನ ಅಲ್ಲಿ ಸಮಯ ಕಳೆದಿದ್ದರು. ವಿಜಯ್ ಜೊತೆ ರಶ್ಮಿಕಾ ಮಂದಣ್ಣ ಕೂಡ ಜಾಯಿನ್ ಆಗಿದ್ದರು ಎನ್ನಲಾಗುತ್ತಿದೆ. ಶೂಟಿಂಗ್ ಸಂದರ್ಭದಲ್ಲೇ ವಿಜಯ್ ದೇವರಕೊಂಡ ಫೋಟೋ ಪೋಸ್ಟ್​ ಮಾಡಿದ್ದರು. ಆದರೆ, ರಶ್ಮಿಕಾ ಮಂದಣ್ಣ ಅವರು ತಡವಾಗಿ ಫೋಟೋ ಶೇರ್ ಮಾಡಿ ಸಿಕ್ಕಿ ಬಿದ್ದಿದ್ದಾರೆ.

Exit mobile version