ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಬ್ಯಾಸ್ಟಿಲ್ ಡೇಯಲ್ಲಿ ಪಾಲ್ಗೊಂಡು, ಫ್ರಾನ್ಸ್ ನೊಂದಿಗೆ ರಕ್ಷಣೆ ಸೇರಿದಂತೆ ಹಲವು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿ ಇದೀಗ ಯುಎಇಗೆ ತೆರಳಿದ್ದಾರೆ. ಈ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾರತೀಯ ತುಕಡಿಗೆ ಸ್ಥಾನ ಸಿಕ್ಕಿರುವುದು ಪ್ರಶಸಂನೀಯ ಎಂದು ಹೇಳಿದ್ದಾರೆ.
ಈ ಫ್ರಾನ್ಸ್ ಭೇಟಿ ಸ್ಮರಣೀಯವಾಗಿದೆ. ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿದ್ದರಿಂದ ಅದು ಮತ್ತಷ್ಟು ವಿಶೇಷವಾಗಿದೆ. ಪರೇಡ್‌ನಲ್ಲಿ ಭಾರತೀಯ ತುಕಡಿ ನೋಡಿ ಹೆಮ್ಮೆಯೆನಿಸಿತು. ಆತ್ಮೀಯ ಆತಿಥ್ಯಕ್ಕಾಗಿ ನಾನು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಫ್ರೆಂಚ್ ಜನರಿಗೆ ಕೃತಜ್ಞನಾಗಿದ್ದೇನೆ.
ಭಾರತ-ಫ್ರಾನ್ಸ್ ಸ್ನೇಹ ಮತ್ತಷ್ಟು ಗಾಢವಾಗಲಿದೆ ಎಂದು ಮೆರವಣಿಗೆಯ ಫೋಟೊಗಳನ್ನು ಮೋದಿ ಟ್ವೀಟ್ ಶುಕ್ರವಾರ ಮಾಡಿದ್ದರು. ಇದೀಗ ಅಪರೂಪದ ಬ್ಯಾಸ್ಟಿಲ್ ಡೇ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಭಾರತದ ತುಕಡಿ ಕೂಡ ಬಾಸ್ಟಿಲ್ ಡೇ ಪರೇಡ್‌ನಲ್ಲಿಪಾಲ್ಗೊಂಡಿರುವುದು ವಿಡಿಯೋದಲ್ಲಿದೆ.
Here are highlights from yesterday’s programmes in Paris, which include the iconic Bastille Day parade. pic.twitter.com/HmDcRSdjs1
— Narendra Modi (@narendramodi) July 15, 2023