main logo

ದೇಶದಲ್ಲಿ ಮತ್ತೊಂದು ರಾಜ್ಯಕ್ಕೆ ಯೋಗಿ ಮುಖ್ಯಮಂತ್ರಿ: ರಾಜಸ್ಥಾನ ಸಿಎಂ ರೇಸ್‌ ನಲ್ಲಿರುವ ಬಾಲಕನಾಥ ಯಾರು

ದೇಶದಲ್ಲಿ ಮತ್ತೊಂದು ರಾಜ್ಯಕ್ಕೆ ಯೋಗಿ ಮುಖ್ಯಮಂತ್ರಿ: ರಾಜಸ್ಥಾನ ಸಿಎಂ ರೇಸ್‌ ನಲ್ಲಿರುವ ಬಾಲಕನಾಥ ಯಾರು

ಜೈಪುರ್: ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ರಾಜಸ್ಥಾನದ ಫಲಿತಾಂಶ ಬಹಳ ಮಂದಿಯ ಗಮನ ಸೆಳೆದಿದೆ. ಈಗಾಗಲೇ ರಾಜಸ್ಥಾನದಲ್ಲಿ ಸಿಎಂ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಕೇಳಿಬರುತ್ತಿದೆ. ಸಾಕಷ್ಟು ಮಂದಿ ಹೆಸರು ಕೇಳಿಬರುತ್ತಿದೆ. ಇದರಲ್ಲಿ ಪ್ರಮುಖವಾದ ಹೆಸರು ಮಹಂತ್ ಬಾಲಕನಾಥ್ ಅವರದ್ದು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಆಗಿ ಮಾಡುವ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಅಂತಹದ್ದೇ ಒಂದು ಪ್ರಯೋಗವನ್ನು ರಾಜಸ್ಥಾನದಲ್ಲಿ ಮಾಡಲು ಬಿಜೆಪಿಗೆ ಅವಕಾಶ ಸಿಕ್ಕಿದೆ. ಅದಕ್ಕೆ ಸೂಕ್ತವಾದವರು ಆಲ್ವಾರ್ ಕ್ಷೇತ್ರದ ಸಂಸದ ಮಹಂತ್ ಬಾಲಕನಾಥ್.

ಯೋಗಿ ಆದಿತ್ಯನಾಥ್ ಮತ್ತು ಮಹಂತ್ ಬಾಲಕನಾಥ್ ಮಧ್ಯೆ ಕೆಲವೊಂದಿಷ್ಟು ಪ್ರಮುಖ ಸಾಮ್ಯತೆಗಳಿವೆ. ಇಬ್ಬರೂ ಕೂಡ ಮಠದ ಮುಖ್ಯಸ್ಥರಾಗಿ ರಾಜಕೀಯ ಸೇರಿಕೊಂಡವರು. ಇಬ್ಬರೂ ಕೂಡ ಪ್ರಖರ ವಾಗ್ಮಿಗಳು, ಫೈರ್​ಬ್ರ್ಯಾಂಡ್ ಲೀಡರ್ ಎಂದು ಹೆಸರಾದವರು. ಯೋಗಿ ಆದಿತ್ಯನಾಥ್ ಸಿಎಂ ಆಗುವ ಮುನ್ನ ಐದಾರು ಬಾರಿ ಸಂಸದರಾಗಿದ್ದವರು. ಈಗ ಬಾಲಕನಾಥ್ ಕೂಡ ಸಂಸದರಾಗಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ನಾಥ ಪರಂಪರೆಯ ಮಠದ ಮುಖ್ಯಸ್ಥರೂ ಹೌದು. ಮಹಂತ್ ಬಾಲಕನಾಥ್ ಅವರೂ ಕೂಡ ನಾಥ ಪರಂಪರೆಯ ಮಠಕ್ಕೆ ಸೇರಿದವರು.
ಆದಿತ್ಯನಾಥ್ ಅವರ ಗೋರಖಪುರದ ಮಠವು ನಾಥ ಪರಂಪರೆಯ ಮೂಲ ಮಠ. ಮಹಂತ್ ಬಾಲಕನಾಥ್ ಅವರು ಮಸ್ತ್ ನಾಥ್ ಯೂನಿವರ್ಸಿಟಿಯ ಕುಲಪತಿ. ಮಸ್ತ್ ನಾಥ್ ಪಂಥದ ಎಂಟನೇ ಮುಖ್ಯ ಮಹಂತ್ ಅವರು.
ಈ ಮಠದ ಹಿಂದಿನ ಸ್ವಾಮೀಜಿಗಳಾದ ಮಹಂತ್ ಚಂದನಾಥ್ ಕೂಡ ಆಲ್ವಾರ್ ಸಂಸದರಾಗಿದ್ದರು. 2016ರಲ್ಲಿ ಚಂದನಾಥ್ ಅವರು ಬಾಲಕನಾಥ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. 2019ರಲ್ಲಿ ಬಾಲಕನಾಥ್ ಆಲ್ವಾರ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸಿ ಕಾಂಗ್ರೆಸ್​ನ ಜಿತೇಂತ್ರ ಸಿಂಗ್ ಅವರನ್ನು ಸೋಲಿಸಿದರು. ಆ ಬಳಿಕ ಮಹಂತ್ ಬಾಲಕನಾಥ್ ಬಾಬಾ ಬಾಲಕನಾಥ್ ಆಗಿ ಖ್ಯಾತರಾಗತೊಡಗಿದರು.

Related Articles

Leave a Reply

Your email address will not be published. Required fields are marked *

error: Content is protected !!