main logo

ಭಾರಿ ಮಳೆ: ಕರಾವಳಿ ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ರೆಡ್‌ ಅಲರ್ಟ್‌

ಭಾರಿ ಮಳೆ: ಕರಾವಳಿ ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ರೆಡ್‌ ಅಲರ್ಟ್‌

ಮಂಗಳೂರು: ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ತೀವ್ರವಾಗಲಿದ್ದು, ರೆಡ್ ಅಲರ್ಟ್​ ಘೋಷಿಸಲಾಗಿದೆ. ಜುಲೈ 29ರವರೆಗೂ ಭಾರಿ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇನ್ನುಳಿದಂತೆ ಬೆಳಗಾವಿ, ಬೀದರ್, ಹಾವೇರಿ, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಅತಿಯಾದ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಸಿದ್ದಾಪುರ, ಭಾಗಮಂಡಲ, ಕ್ಯಾಸಲ್​ರಾಕ್, ಗೇರುಸೊಪ್ಪ, ಯಲ್ಲಾಪುರ, ಸುಬ್ರಹ್ಮಣ್ಯ, ಕೊಟ್ಟಿಗೆಹಾರ, ನಾಪೋಕ್ಲು, ಕದ್ರಾ, ಕುಮಟಾ, ಮಂಕಿ, ಹುಂಚದಕಟ್ಟೆ, ಮೂರ್ನಾಡು, ಶಿರಾಲಿ, ಹೊನ್ನಾವರ, ಕೊಲ್ಲೂರು, ತಾಳಗುಪ್ಪ, ಸೋಮವಾರಪೇಟೆ, ಕಮ್ಮರಡಿ, ಕೊಪ್ಪ, ಉಪ್ಪಿನಂಗಡಿ, ಲಿಂಗನಮಕ್ಕಿಯಲ್ಲಿ ಅತಿಯಾದ ಮಳೆಯಾಗಿದೆ.
ಗೋಕರ್ಣ, ಮಂಚಿಕೆರೆ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ, ಮಂಗಳೂರು ವಿಮಾನ ನಿಲ್ದಾಣ, ಕಳಸ, ಜಯಪುರ, ಕಾರ್ಕಳ, ಕುಂದಾಪುರ, ಕಿರವತ್ತಿ, ಬನವಾಸಿ, ಅಂಕೋಲಾ, ತ್ಯಾಗರ್ತಿ, ಹುಡುಕೆರೆ, ಬೆಳಗಾವಿ, ಶೃಂಗೇರಿ, ಮೂಡಿಗೆರೆ, ಪಣಂಬೂರು, ಕೋಟ, ಬಾಳೆಹೊನ್ನೂರು, ಸಕಲೇಶಪುರ, ವಿರಾಜಪೇಟೆ, ಆನವಟ್ಟಿಯಲ್ಲಿ ಭಾರಿ ಮಳೆಯಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!