Site icon newsroomkannada.com

ಪುತ್ತೂರು: ಚೌಟರ ಪರ ರೋಡ್ ಶೋದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಭಾಗಿ

ಪುತ್ತೂರು:  ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ದಾಖಲೆಯ ಅಂತರದಿಂದ ಗೆಲ್ಲಿಸಬೇಕು. ಭಾರತೀಯ ಸೇನೆಯ ಗೋರ್ಖಾ ರೆಜಿಮೆಂಟಿನಲ್ಲಿ ದೇಶ ಸೇವೆ ಮಾಡಿ ಬಂದವರು. ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗಣ ಅಭಿವೃದ್ಧಿಯ ಬಗ್ಗೆ ದೊಡ್ಡ ಕನಸನ್ನು ಇಟ್ಟುಕೊಂಡ ವ್ಯಕ್ತಿ ನಮಗೆ ಅಭ್ಯರ್ಥಿಯಾಗಿ ಸಿಕ್ಕಿದ್ದಾರೆ. ರೆಕಾರ್ಡ್ ಮಾದರಿಯಲ್ಲಿ ಗೆಲ್ಲಿಸಿ ಮೋದಿಯವರ ಕೈಬಲಪಡಿಸಬೇಕು ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

 

ಪುತ್ತೂರಿನಲ್ಲಿ ರೋಡ್ ಶೋ ನಡೆಸಿದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೋದಿಯವರು ಮತ್ತೊಮ್ಮೆ ಪ್ರಧಾನಿ ಹೇಗೂ ಆಗುತ್ತಾರೆ ಎಂದು ಉದಾಸೀನ ತಾಳುವುದು ಬೇಡ. ಕಳೆದ ಬಾರಿ 79 ಪರ್ಸೆಂಟ್ ಓಟಿಂಗ್ ಆಗಿತ್ತು. ಅದನ್ನು ನಾವು 85 ಪರ್ಸೆಂಟ್ ಆಗುವಂತೆ ಮಾಡಬೇಕಾಗಿದೆ. ಗೆಲುವಿನ ಅಂತರವನ್ನು ದಾಖಲೆಯ ಮಟ್ಟಕ್ಕೆ ಒಯ್ಯಬೇಕಾಗಿದೆ. ಎಪ್ರಿಲ್ 19ರಂದು ಮೊದಲ ಹಂತದ ಓಟಿಂಗ್ ತಮಿಳುನಾಡು ಸೇರಿ ಕೆಲವು ಕಡೆ ಆಗಿದೆ. ಆದರೆ, 2019ಕ್ಕೆ ಹೋಲಿಸಿದರೆ ಈ ಬಾರಿ ಮೊದಲ ಹಂತದಲ್ಲಿ ಓಟಿಂಗ್ ಪರ್ಸೆಂಟ್ ಕಡಿಮೆಯಾಗಿದೆ. ಬಿಸಿಲು ಜಾಸ್ತಿಯಿದೆಯೆಂದು ನಾವು ಓಟ್ ಮಾಡದೇ ಇರುವುದಲ್ಲ.

 

ಯಾರಿಗೆಲ್ಲ ನಮ್ಮ ಪ್ರಧಾನಿ ಮೋದಿ ಮೇಲೆ ಪ್ರೀತಿ ಇದೆಯೋ ಅವರೆಲ್ಲ ಓಟ್ ಮಾಡಲೇಬೇಕಾಗಿದೆ. ಮೋದಿಯವರು 400 ಸ್ಥಾನಗಳನ್ನು ಗೆಲ್ಲಿಸುವ ಗುರಿ ನೀಡಿದ್ದಾರೆ. ಮುಂದಿನ 25 ವರ್ಷದ ಕನಸು ಇಟ್ಟುಕೊಂಡು ಮೋದಿ ಈ ಗುರಿ ಇಟ್ಟಿದ್ದಾರೆ. ನಾವೆಲ್ಲ ಮೋದಿಯವರ ಗುರಿ ಸಾಧನೆಗೆ ಬೆಂಬಲ ನೀಡಬೇಕಾಗಿದೆ. ಆದರೆ ಕಾಂಗ್ರೆಸಿನವರು ಚೊಂಬು ಹಿಡ್ಕೊಂಡು ಓಡಾಡುತ್ತಿದ್ದಾರೆ. ಮೋದಿಯವರು ಇಷ್ಟೊಂದು ಸಂಖ್ಯೆಯಲ್ಲಿ ಟಾಯ್ಲೆಟ್ ಕಟ್ಟಿಕೊಟ್ಟಿದ್ದಾರೆ, ಕಾಂಗ್ರೆಸ್ ಈಗಲೂ ಯಾಕೆ ಚೊಂಬು ಹಿಡ್ಕೊಂಡು ಹೋಗುತ್ತಿದ್ದಾರೆಂದು ಅರ್ಥವಾಗಲ್ಲ. ಕಾಂಗ್ರೆಸಿಗೆ ವಾರಂಟಿ ಇಲ್ಲ, ಅವರಿಗೆ ಗ್ಯಾರಂಟಿಯೂ ಇಲ್ಲ ಎಂದು ವ್ಯಂಗ್ಯವಾಡಿದರು.

Exit mobile version