ಬೆಂಗಳೂರು: ಮೆಟ್ರೋ ನಗರಿಯಲ್ಲಿ (Metro City) ತುಳುನಾಡಿನ (Tulunadu) ಜಾನಪದ ಕ್ರೀಡೆಯಾಗಿರುವ ಕಂಬಳವನ್ನು (Kambala) ಅದ್ದೂರಿಯಾಗಿ ಆಯೋಜನೆ ಮಾಡಲು ಯೋಜಿಸಿ ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಅವರು ಇಂದು (ಸೆ.15) ತಮ್ಮೂರಿನವರೇ ಆದ ಯಶಸ್ವಿ ಉದ್ಯಮಿ ಬೆಳ್ಳಪ್ಪಾಡಿ ಗುಣರಂಜನ್ ಶೆಟ್ಟಿ (Bellippadi Gunaranjan Shetty) ಅವರ ಕಚೇರಿಗೆ ತೆರಳಿ ಅವರೊಂದಿಗೆ ಚರ್ಚೆ ನಡೆಸಿದರು.
ಇಲ್ಲಿನ ಎಂ.ಜಿ. ರಸ್ತೆಯ (MG Road) ಬಾರ್ಟನ್ ಸೆಂಟರ್ (Barton Center) ನಲ್ಲಿರುವ ಗುಣರಂಜನ್ ಶೆಟ್ಟಿ ಅವರ ಕಚೇರಿಗೆ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದ ಸಂದರ್ಭ ಅವರನ್ನು ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆತ್ಮೀಯವಾಗಿ ಸ್ವಾಗತಿಸಿದರು.
ತಮ್ಮ ಕಚೇರಿಗೆ ಆಗಮಿಸಿದ ಶಾಸಕರನ್ನು ಬಿ. ಗುಣರಂಜನ್ ಶೆಟ್ಟಿ ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಗೌರವಿಸಿದರು.
ಬಳಿಕ ಶಾಸಕರು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿರುವ ಕಂಬಳ ಕೂಟದ ಕುರಿತಾಗಿ ಗುಣರಂಜನ್ ಶೆಟ್ಟಿ ಅವರ ಬಳಿ ಸುದೀರ್ಘವಾಗಿ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ತುಳುಕೂಟ ಬೆಂಗಳೂರು ಅಧ್ಯಕ್ಷರಾದ ಸುಂದರ್ ರಾಜ್, ಅಕ್ಷಯ್ ರೈ ದಂಬೆಕಾನ, ಮುರಳೀಧರ ರೈ ಮಠಂತಬೆಟ್ಟು, ನವೀನ್ ಕಲ್ಲಡ್ಕ ಉಪಸ್ಥಿತರಿದ್ದರು.