ವಿಟ್ಲ: ನಂದಿಕೂರಿನಿಂದ ಕಾಸರಗೋಡಿಗೆ ಹೋಗುವ 400ಕೆ.ವಿ ಹೈಟೆನ್ಶನ್ ಮಾರ್ಗವನ್ನು ಪುಣಚ ಗ್ರಾಮದ ಬೈಲಕಟ್ಟೆಯಿಂದ ಕಾಮಗಾರಿ ಆರಂಭ ಮಾಡಲು ಯತ್ನಿಸಿದಾಗ ರೈತ ವರ್ಗದವರು ಪ್ರತಿಭಟಿಸಿದ ಘಟನೆ ನಡೆದಿದೆ. ಈ ಬಗ್ಗೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹಿಂದೂ ಮುಖಂಡ ಅರುಣ್ ಪುತ್ತಿಲ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ಯಾವುದೇ ಕಾರಣಕ್ಕೂ ಕಾಮಗಾರಿ ಅನುಷ್ಠಾನ ಮಾಡೋದಕ್ಕೆ ಬಿಡೋದಿಲು,, ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ಯಾವುದೇ ಆಸ್ಪದ ಕೊಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಅದೇರೀತಿ ರೈತ ವರ್ಗದವರ ಜೊತೆ ಯಾವಾಗಲೂ ನಿಲ್ಲುವುದಾಗಿ, ರೈತರ ಪರ ಪುತ್ತಿಲ ಬ್ಯಾಟ್ ಬೀಸಿದ್ದು, ನಿಮ್ಮೊಂದಿಗೆ ನಾನಿದ್ದೇನೆ ಎಂಬ ಭರವಸೆಯನ್ನು ರೈತರಿಗೆ ನೀಡಿದರು.
400 ಕೆ.ವಿ. ವಿದ್ಯುತ್ ವಿರೋಧಿ ಹೋರಾಟ ಸಮಿತಿ ವಿಟ್ಲದ ಅಧ್ಯಕ್ಷರಾದ ರಾಜೀವ ಗೌಡ, ಸಂಜೀವ ಗೌಡ ಒಕ್ಕೆತ್ತೂರು, ಚಿತ್ರಾಲಿಜನ್ ಮಂಗಲಪದವು ಲೋಹಿತಾಕ್ಷ ಮಂಗಲದವು ದಾಮೋದರ ಗೌಡ ಒಕ್ಕೆತ್ತೂರು, ಅಬ್ಬಾಸ್ ಪುಣಚ, ಪುಣಚ ಪಂಚಾಯತ್ ಸದಸ್ಯ ಅಶೋಕ್ ಭಾಸ್ಮ ಉಪಾಧ್ಯಾಯ ಪುಣಚ, ಪಾರ್ಥ ಸಾರಥಿ ವಾರಣಾಸಿ ಹಾಗೂ ಪುತ್ರಿ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತ, ಸುಧೀರ್ ಕುಮಾರ್ ಶೆಟ್ಟಿ ಮೊಡಂಬೈಲ್ ಭೀಮ ಭಟ್, ರಘುರಾಮ್ ಶೆಟ್ಟಿ, ವಿಟ್ಲ ಶರತ್ ಎನ್.ಎಸ್., ನವೀನ್ ಕುಮಾರ್ ಕಾಶೀ ಮಠ ಮತ್ತು ಹಲವರು ಉಪಸ್ಮಿತರಿದ್ದರು