Site icon newsroomkannada.com

ಮಂಗಳಾದೇವಿ ದೇವಸ್ಥಾನದಲ್ಲಿ ವ್ಯಾಪಾರ ನಿರಾಕರಣೆ ವಿರುದ್ಧ ಪ್ರತಿಭಟನೆ

Protest against denial of business at Mangaladevi temple

ಮಂಗಳೂರು: ಮಂಗಳಾದೇವಿ ದೇವಸ್ಥಾನದಲ್ಲಿ ವ್ಯಾಪಾರ ನಿರಾಕರಣೆ ವಿರುದ್ಧ ದ. ಕ ಹಾಗೂ ಉಡುಪಿ ಜಿಲ್ಲಾ ವ್ಯಾಪಾರಸ್ಥರ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡ ಇಮ್ತಿಯಾಜ್, ಮಂಗಳಾದೇವಿ ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿರಾಕರಿಸಿದ್ದಾರೆ. ಅಲ್ಲಿಗೆ ಬಂದ ವ್ಯಾಪಾರಸ್ಥರನ್ನ ವಾಪಸ್ ಕಳಿಸಿದ್ದಾರೆ. ವ್ಯಾಪಾರಸ್ಥರಿಗೆ ಧೈರ್ಯ ತುಂಬುವ ಬದಲು ಸನಾತನ ಜಾತ್ರ ವ್ಯಾಪಾರ ಸಂಘದವರು ಮನವಿ ಕೊಟ್ಟಿದ್ದಾರೆಂದು ವಾಪಸ್ ಕಳಿಸಿದ್ದಾರೆ. ವ್ಯಾಪಾರಕ್ಕೆ ಅವಕಾಶ ಕೊಟ್ಟರೆ ಸಂಘರ್ಷವಾಗುತ್ತೆ ಎಂದು ವಾಪಸ್ ಕಳಿಸಿರುವ ಘಟನೆ ನಡೆದಿದೆ.

ಮಂಗಳದೇವಿ ಕ್ಷೇತ್ರ ಮುಜುರಾಯಿ ಇಲಾಖೆಯಲ್ಲಿರುವ ದೇವಸ್ಥಾನ. ಪ್ರಾಂಗಣದ ಒಳಗೆ ವ್ಯಾಪಾರಕ್ಕೆ ಅವಕಾಶ ಕೊಡಲಿಲ್ಲವೆಂದರೆ ಪರವಾಗಿಲ್ಲ. ಮಹಾನಗರ ಪಾಲಿಕೆಯಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಬಹುದು. ಅಂಗಡಿ ಸ್ಟಾಲ್ ಗಳನ್ನ ಹಂಚಿಕೆ ಮಾಡುವ ವಿಚಾರದಲ್ಲಿ ಜಿಲ್ಲಾಡಳಿತ ಮಹಾನಗರ ಪಾಲಿಕೆ ನಿರ್ಲ್ಯಕ್ಷ್ಯ ತೋರಿದ್ದಾರೆ. ಅಲ್ಲಿ ಬರುವ ವ್ಯಾಪಾರಸ್ಥರ ಮೇಲೇ ಹಲ್ಲೆ ಬೆದರಿಸುವ ಕೆಲಸ ಆದರೆ ಅದಕ್ಕೆ ಪೊಲೀಸ್ ಇಲಾಖೆ ನೇರ ಹೊಣೆ. ಮಂಗಳೂರು ಕಮಿಷನರ್ ಗೆ ಗೌರವ ಕೊಡಲು ಗೊತ್ತಿಲ್ಲ. ವ್ಯಾಪಾರ ನಡೆಸಲು ಅನುಮತಿ ಇಲ್ಲಾ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಗಂಡಸ್ತನ ಇದ್ರೆ ಮುಸ್ಲಿಂ ರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿ ಕೋಡಿ. ಬಡವರ ಕಣ್ಣಲ್ಲಿ ನೀರು ತರಿಸಬೇಡಿ. ಬಡವರಿಗೆ ಬದುಕಲು ಅವಕಾಶ ಮಾಡಿಕೊಡಿ. ಅನ್ನಕ್ಕೆ ನೀರು ಇತ್ತು ಬಂದ ಜಾತ್ರ ವ್ಯಾಪಾರಿಗಳು ಅವಕಾಶಕ್ಕಾಗಿ ಅಲೆಯುತ್ತಿದ್ದಾರೆ. ನಿಮ್ಮ ಬಿಟ್ಟಿ ಗ್ಯಾರೆಂಟಿ ನಮಗೆ ಬೇಡ, ಬದುಕುವ ಗ್ಯಾರೆಂಟಿ ಕೊಡಿ ಎಂದು ಹೇಳಿದ್ದಾರೆ.

Exit mobile version