Site icon newsroomkannada.com

ಪ್ರಿಯಾಂಕ್‌ ಖರ್ಗೆ ನಡೆಯಿಂದ ನಮಗೆ ಮುಜುಗರ: ನಕಲಿ ವೈರಲ್‌ ಪೋಸ್ಟ್‌ನಲ್ಲೇನಿದೆ ಗೊತ್ತಾ

ಉಡುಪಿ: ಪ್ರಿಯಾಂಕ್‌ ಖರ್ಗೆ ನಡೆಯಿಂದ ನಮಗೆ ಮುಜುಗರವಾಗುತ್ತಿದೆ ಅನ್ನೋ ನಕಲಿ ವೈರಲ್ ಪೋಸ್ಟ್ ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕಿಡಿಕಾರಿದೆ. ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಿರುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಸೈಬರ್ ಕ್ರೈಂ ಮೂಲಕ ಸೂಕ್ತ ತನಿಖೆಗೆ ಆಗ್ರಹಿಸಿ ಮನವಿ ಮಾಡಲಾಗಿದ್ದು, ಗೃಹ ಇಲಾಖೆಗೆ ಸಂಬಂಧಿಸಿದ ವಿಷಯಗಳಿಗೆ ನೀವು ಅನವಶ್ಯಕ ತಲೆ ಹಾಕುತ್ತೀರಿ, ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿ ಪಕ್ಷಕ್ಕೆ ಮುಜುಗರವಾಗುತ್ತಿದೆ. ಕಾರ್ಯಕರ್ತರಾದ ನಮಗೆ ಕ್ಷೇತ್ರದಲ್ಲಿ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ.

ನೀವು ಕಚೇರಿಯಲ್ಲಿ ಕುಳಿತು ಸುಖಾಸುಮ್ಮನೆ ಟ್ವೀಟ್ ಮಾಡುವುದರಿಂದ ಜನಸಾಮಾನ್ಯರಿಗೆ ಸಮಜಾಯಿಷಿ ನೀಡಲು ನಮಗೆ ಕಷ್ಟವಾಗುತ್ತಿದೆ. ಪಕ್ಷ ಸಂಘಟನೆಯ ಮೇಲೆ ನಿಮ್ಮಿಂದ ಕೆಟ್ಟ ಪರಿಣಾಮವಾಗಿದೆ. ಅನಗತ್ಯ ವಿಷಯಗಳಿಗೆ ಅಭಿಪ್ರಾಯ ಹೇಳುವುದು ಬಿಡಿ ಎಂಬ ಪೋಸ್ಟರ್ ವೈರಲ್ ಆಗುತ್ತಿದೆ.

Exit mobile version