ಮಂಗಳೂರು : ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ 66ರ (National Highway 66) ಹೊಸಬೆಟ್ಟು (Hosabettu) ಎಂಬಲ್ಲಿ ಖಾಸಗಿ ಎಕ್ಸ್‌ಪ್ರೆಸ್ ಬಸ್ (Private Express Bus)ನ ಶರವೇಗಕ್ಕೆ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅಪಘಾತದ ಭೀಕರತೆಯ ವಿಡಿಯೋ ವೈರಲ್ ಆಗಿದೆ.
ಹಳೆಯಂಗಡಿ ಇಂದಿರಾ ನಗರ ನಿವಾಸಿ ಮುಹಮ್ಮದ್ ಸಾಹಿಲ್ ಹಾಗೂ ಪಕ್ಷಿಕೆರೆ ಹೊಸಕಾಡು ನಿವಾಸಿ ಅರಾಫತ್ ಗಾಯಾಳುಗಳು.
ಸುರತ್ಕಲ್ (Surathkal) ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಎಂಬಲ್ಲಿ ಶರವೇಗದಲ್ಲಿ ಬಂದ ಮಂಗಳೂರು – ಉಡುಪಿ AKMS ಎಕ್ಸ್‌ಪ್ರೆಸ್ ಬಸ್ ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ನಿಂತಿದೆ.
ಡಿಕ್ಕಿಯ ಹೊಡೆತಕ್ಕೆ ಯುವಕರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ನಗರದ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ತೀವ್ರತೆಯ ವಿಡಿಯೋ ಇದೀಗ ವೈರಲ್ ಆಗಿದ್ದು. ಸಾರ್ವಜನಿಕರು ಎಕ್ಸ್‌ಪ್ರೆಸ್ ಬಸ್‌ಗಳ ಶರವೇಗದ ಅವಾಂತರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.