ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಶರಣಾಗತಿಗೆ ಜೂನ್ 30 ರ ಡೆಡ್ ಲೈನ್ ವಿಧಿಸಲಾಗಿದೆ. ಶರಣಾಗದೆ ಹೋದಲ್ಲಿ ಆಸ್ತಿ ಜಪ್ತಿ ಮಾಡುವ ಎಚ್ಚರಿಕೆಯನ್ನು ಎನ್ ಐ ಎ ನೀಡಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ 4 ಪ್ರಮುಖ ಆರೋಪಿಗಳಿಗಾಗಿ ಎನ್‌ಐಎ ತೀವ್ರ ಶೋಧ ನಡೆಸಿತ್ತು. ಒಟ್ಟು 21 ಆರೋಪಿಗಳ ಪೈಕಿ 16 ಮಂದಿ ಎನ್ ಐ ಎ ವಶವಾಗಿದ್ದಾರೆ. ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಮೂವರ ಮನೆಗೆ ದಾಳಿ ನಡೆಸಿದ್ದ ಎನ್ ಐ ಎ ಅಧಿಕಾರಿಗಳು ಜೂನ್ 28 ರಂದು ಮೈಕ್ ಮೂಲಕ ಆರೋಪಿಗಳಿಗೆ ಶರಣಾಗುವಂತೆ ಡೆಡ್ ಲೈನ್ ವಿಧಿಸಿದ್ದರು. ಆರೋಪಿಗಳ ಪತ್ತೆಗಾಗಿ ನಗದು ಬಹುಮಾನವನ್ನೂ ಘೋಷಿಸಿದ್ದರೂ ಕೂಡ ಇದುವರೆಗೂ ಪ್ರಕರಣದ 5 ಪ್ರಮುಖ ಆರೋಪಿಗಳು ಪತ್ತೆಯಾಗಿಲ್ಲ. ಜೂನ್ 27ರಂದು ಕೊಡಗಿನ ಅಬ್ದುಲ್ ನಸಿರ್, ಅಬ್ದುಲ್ ರೆಹಮಾನ್, ಬೆಳ್ತಂಗಡಿ ಪದಂಗಡಿ ನಿವಾಸಿ ನೌಶಾದ್ ಮನೆಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಬಳಿಕ ನೌಶಾದ್ ಎಂಬಾತ ತಲೆ ಮರೆಸಿಕೊಂಡಿದ್ದು, ದಾಳಿ ವೇಳೆ ನೌಶಾದ್ ಮನೆಯಲ್ಲಿ ಅಗತ್ಯ ದಾಖಲೆಗಳನ್ನು ಎನ್‌ಐಎ ಕಲೆಹಾಕಿದ್ದು, ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.