main logo

ಪ್ರವೀಣ್ ಜೋಷಿ ಎಚ್.ಎಸ್. ಗೆ ಪಿಹೆಚ್‌.ಡಿ. ಪದವಿ

ಪ್ರವೀಣ್ ಜೋಷಿ ಎಚ್.ಎಸ್. ಗೆ ಪಿಹೆಚ್‌.ಡಿ. ಪದವಿ

ಬೀದರ್‌: ಬೀದರ್ ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು 16ನೇ ಅಕ್ಟೋಬರ್ ದಂದು ನಡೆದ 13ನೇ ಘಟಿಕೋತ್ಸವದಲ್ಲಿ ಪ್ರವೀಣ್ ಜೋಷಿ ಎಚ್.ಎಸ್. ರವರಿಗೆ ಪಿಹೆಚ್.ಡಿ. ಪದವಿ ನೀಡಿ ಗೌರವಿಸಿದೆ.

ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಜಲ ಪರಿಸರ ನಿರ್ವಹಣೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ವಿಶ್ವವಿದ್ಯಾಲಯದ ಶಿಕ್ಷಕರ ಸಂಘವು ಗುರುತಿಸಿರುವ ಮಹಾವಿದ್ಯಾಲಯದ ಮೀನುಗಾರಿಕೆ ವೀಷಯದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಪ್ರೊಫೆಸರ್ ಡಾ. ಎ.ಟಿ. ರಾಮಚಂದ್ರ ನಾಯ್ಕ ರವರ ಮಾರ್ಗದರ್ಶನದಲ್ಲಿ ನಡೆಸಿ ಮಂಡಿಸಿದ ಸಂಶೋಧನಾ ವಿಷಯ “ವಿವಿಧ ಜಲಕೃಷಿ ವ್ಯವಸ್ಥೆಗಳಲ್ಲಿ ಉತ್ಪಾದಕತೆ ಮತ್ತು C/N ಅನುಪಾತದ ಮೌಲ್ಯಮಾಪನ” ಎಂಬ ಮಹಾಪ್ರಬಂಧಕ್ಕೆ ಪಿಹೆಚ್.ಡಿ. ಪದವಿ ಲಭಿಸಿದೆ.

ಕರ್ನಾಟಕದ ಘನವೆತ್ತ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಥಾವರ್ ಚಂದ್ ಗೆಹ್ಲೋಟ್ ರವರು ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ಪಶುಸಂಗೋಪನೆ ಸಚಿವ ಮತ್ತು ವಿಶ್ವವಿದ್ಯಾಲಯದ ಅಪಾರ ಕುಲಪತಿಳಾದ ಕೆ. ವೆಂಕಟೇಶ್ , ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಡಾ|| ಅಗರ್ವಾಲ್ ಹಾಗೂ ವಿಶ್ವವಿದ್ಯಾಲಯದ ಕುಲಪತಿ ಡಾ|| ಕೆ.ಸಿ. ವೀರಣ್ಣ ರವರು ಉಪಸ್ಥಿತರಿದ್ದರು. ಪ್ರವೀಣ್ ಜೋಷಿ ಎಚ್.ಎಸ್. ರವರು ಮೂಲತಃ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ವಿದ್ಯೋದಯ ಶಾಲೆಯ ಹಳೆಯ ವಿದ್ಯಾರ್ಥಿ. ಇವರು ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದ ನಿವಾಸಿಗಳಾದ ದಿ|| ಸಿದ್ದರಾಜು ಎಸ್. ಮತ್ತು ಶ್ರೀಮತಿ ವಿಜಯ ದಂಪತಿಗಳ ಪುತ್ರ.

Related Articles

Leave a Reply

Your email address will not be published. Required fields are marked *

error: Content is protected !!