Site icon newsroomkannada.com

ಕಟೀಲು ಕ್ಷೇತ್ರಕ್ಕೆ ದೇವಾಲಯಕ್ಕೆ ಪ್ರಭಾಸ್ ಭೇಟಿ: ಕಾರಣವೇನು ಗೊತ್ತಾ?: ವಿಡಿಯೋ ನೋಡಿ

ಕಟೀಲು: ‘ಸಲಾರ್’ ಸಿನಿಮಾ ತಂಡ ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಗೆಲುವಿನ ಸಂಭ್ರಮ ಆಚರಣೆ ಮಾಡಿದೆ. ಇದೇ ಖುಷಿಯಲ್ಲಿ ಇದೀಗ ಸಲಾರ್‌ ನಾಯಕ ಪ್ರಭಾಸ್ ಕರ್ನಾಟಕದ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪ್ರಭಾಸ್, ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಕ್ಷೇತ್ರದ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೊಂಬಾಳೆ ನಿರ್ಮಾಣ ಸಂಸ್ಥೆಯ ಮಾಲೀಕ ‘ಸಲಾರ್’ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಸಹ ಪ್ರಭಾಸ್​ರ ಜೊತೆಗಿದ್ದರು. ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಪ್ರಭಾಸ್​ಗೆ ದೇವಾಲಯದ ವತಿಯಿಂದ ದೇವಿಯ ವಿಗ್ರಹ ನೀಡಿ ಗೌರವ ಸಲ್ಲಿಸಲಾಗಿದೆ.
ನಿರ್ಮಾಪಕ ವಿಜಯ್ ಕಿರಗಂದೂರು ಅವರು ದುರ್ಗಾಪರಮೇಶ್ವರಿಯ ಪರಮ ಭಕ್ತರು. ಕಿರಗಂದೂರು ಅವರು ಹಲವು ಭಾರಿ ಕಟೀಲಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ‘ಸಲಾರ್’ ಸಿನಿಮಾ ಗೆದ್ದ ಬಳಿಕ ಇದೀಗ ಪ್ರಭಾಸ್ ಅವರನ್ನೂ ಜೊತೆಗೆ ಕರೆತಂದು ದೇವಿಯ ದರ್ಶನ ಮಾಡಿದ್ದಾರೆ.

ಪ್ರಭಾಸ್ ಸಹ ದೈವ ಭಕ್ತರು. ಅವರ ಕುಟುಂಬ ಕಾಳಹಸ್ತಿಯ ಶ್ರೀಕಾಲಹಸ್ತೀಶ್ವರ ದೇವಾಲಯಕ್ಕೆ ದಶಕಗಳಿಂದಲೂ ನಡೆದುಕೊಂಡು ಬಂದಿದ್ದಾರೆ. ಪ್ರಭಾಸ್​ರ ದೊಡ್ಡಪ್ಪನವರಿಗೆ ಪ್ರಭಾಸ್, ಕಾಲಹಸ್ತೀಶ್ವರನ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇತ್ತಂತೆ. ಇದೇ ಕಾರಣಕ್ಕೆ ಈಗ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ‘ಕಣ್ಣಪ್ಪ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಪ್ರಭಾಸ್, ‘ಆದಿಪುರುಷ’ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದರು. ಆದರೆ ಸಿನಿಮಾ ಹಿಟ್ ಎನಿಸಿಕೊಳ್ಳಲಿಲ್ಲ.

Exit mobile version