ಬೇಕಾದ ಸಾಮಾಗ್ರಿಗಳು: ಬಟಾಟೆ- 1, ಮೊಟ್ಟೆ-2, ಕಾಯಿಮೆಣಸು-1, ಕರಿಮೆಣಸಿನ ಹುಡಿ- 1ಚಮಚ, ಅರಶಿನ-1/2 ಚಮಚ, ಈರುಳ್ಳಿ-2, ಎಣ್ಣೆ- 1/4ಲೀಟರ್, ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿಕೊಳ್ಳಿ, ಎಣ್ಣೆ ಬಿಸಿ ಆದ ನಂತರ ಅದಕ್ಕೆ ಸಣ್ಣದಾಗಿ ಕೊಚ್ಚಿಟ್ಟ ಬಟಾಟೆ ಹಾಕಿ, ನಂತರ ಕೊಚ್ಚಿ ಇಟ್ಟಂತ ಈರುಳ್ಳಿಯನ್ನ ಕೂಡಾ ಹಾಕಿಕೊಳ್ಳಿ. ಅದು ಸ್ವಲ್ಪ ಬೆಂದ ನಂತರ ಅದನ್ನ ತೆಗೆದು ಪ್ಲೇಟ್ ನಲ್ಲಿ ಹಾಕಿಕೊಳ್ಳಿ. ಒಂದು ಪಾತ್ರಕ್ಕೆ ಉಪ್ಪು , ಅರಶಿನ, ಕರಿಮೆಣಸಿನ ಹುಡಿ ಹಾಕಿ, ನಂತರ ಮೊಟ್ಟೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಅದಕ್ಕೆ ಕಾಯಿಮೆಣಸು , ಈರುಳ್ಳಿ, ಫ್ರೈ ಮಾಡಿದಂತ ಬಟಾಟೆ ಈರುಳ್ಳಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಕೊಡಿ, ಮತ್ತೆ ಬಾನಾಲೆ ಗೆ ಎಣ್ಣೆಯನ್ನು ಹಾಕಿ, ಮಾಡಿದಂತಹ ಮಿಶ್ರಣವನ್ನು ಕಾದ ಎಣ್ಣೆಗೆ ಹಾಕಿ ಎರಡು ಬದಿಯನ್ನು ಕೂಡಾ ಬೇಯಿಸಿಕೊಳ್ಳಿ, ಈಗ ರುಚಿಯಾದ ಬಟಾಟೆ ಆಮ್ಲೆಟ್ ತಿನ್ನಲು ಸಿದ್ಧ.