ವಾಷಿಂಗ್ಟನ್: ಇನ್ನು ಮುಂದೆ ಟ್ವಿಟರ್‌ನ ಹೊಸ ಬಳಕೆದಾರರು ಟ್ವಿಟರ್‌ನಲ್ಲಿ ಪೋಸ್ಟ್ ಹಾಕಲು, ರಿಫ್ಲೈ ಮಾಡಲು ಹಾಗೂ ಲೈಕ್ ಒತ್ತಲು ಸಹ ಹಣ ಪಾವತಿ ಮಾಡಬೇಗುತ್ತದೆ. ಟ್ವಿಟರ್ ಖಾತೆ ತೆರೆಯುವ ಹೊಸ ಬಳಕೆದಾರರಿಗೆ ವಾರ್ಷಿಕ ಶುಲ್ಕ ವಿಧಿಸಲಾಗುತ್ತದೆ ಎಂದು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ತಿಳಿಸಿದ್ದಾರೆ. ಆದರೆ ವಾರ್ಷಿಕ ಶುಲ್ಕದ ಮಾಹಿತಿಯ ವಿವರವನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ.
ಸ್ಪಾಮ್ ಅನ್ನು ತಗ್ಗಿಸಲು ಹಾಗೂ ಪ್ರತಿಯೊಬ್ಬರಿಗೂ ಉತ್ತಮ ಅನುಭವ ಕಲ್ಪಿಸಲು ಈ ಕ್ರಮ ಅಗತ್ಯ. ಹೊಸ ಖಾತೆದಾರರು ವಾರ್ಷಿಕ ಶುಲ್ಕ ಪಾವತಿಸಬೇಕಾಗುತ್ತದೆ. ಆಗ ಮಾತ್ರ ಅವರು ಪೋಸ್ಟ್ ಹಾಕಲು, ಲೈಕ್, ಬುಕ್‌ಮಾರ್ಕ್ ಅಥವಾ ರಿಫ್ಲೈ ಮಾಡಲು ಸಾಧ್ಯವಾಗುತ್ತದೆ. ಆದರೆ ಫಾಲೋ ಮಾಡಲು ಮತ್ತು ಟ್ವಿಟರ್ ಬಳಕೆ ಪ್ರತಿಯೊಬ್ಬರಿಗೆ ಉಚಿತವಿದೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ