ಕಾಪು: ನಾಗರ ಪಂಚಮಿಯ ದಿನವಾದ ಸೋಮವಾರದಂದು (ಆ.21) ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರಿನಲ್ಲೊಂದು ಪ್ರಾಕೃತಿ ವಿಸ್ಮಯ ಘಟಿಸಿದೆ.
ಮಜೂರಿನಲ್ಲಿ ನಾಗರ ಪಂಚಮಿಯ ಪ್ರಯುಕ್ತ ಎರಡು ಜೀವಂತ ನಾಗರ ಹಾವುಗಳಿಗೆ ಜಲಾಭಿಷೇಕ ಮತ್ತು ಆರತಿ ಬೆಳಗಲಾಯಿತು.
ಮಜೂರಿನ ಉರಗ ತಜ್ಞ ಗೋವರ್ಧನ್ ಭಟ್ ಅವರು ಗಾಯಗೊಂಡು ಸಿಕ್ಕಿದ ಹಾವುಗಳನ್ನು ರಕ್ಷಣೆ ಮಾಡಿ ಬಳಿಕ ಅವುಗಳನ್ನು ಆರೈಕೆಗೊಳಿಸಿ ಮರಳಿ ಕಾಡಿಗೆ ಬಿಡುವ ಹವ್ಯಾಸವನ್ನು ಹೊಂದಿದ್ದಾರೆ.
ಕೆಲ ದಿನಗಳ ಹಿಂದೆ ರಿಕ್ಷಾದ ಅಡಿಗೆ ಬಿದ್ದ ಹಾವನ್ನು ರಕ್ಷಿಸಿ, ಶುಶ್ರೂಷೆ ನೀಡುತ್ತಿದ್ದಾರೆ. ಮತ್ತೊಂದು ಹಾವನ್ನು ನಾಯಿ ಕಚ್ಚಿ ಗಾಯಗೊಳಿಸಿತ್ತು.
ಈ ಎರಡು ಹಾವುಗಳಿಗೆ ಗೋವರ್ಧನ್ ಭಟ್ ಅವರು ತಮ್ಮ ಮನೆಯಲ್ಲಿ ಶುಶ್ರೂಷೆ ನೀಡುತ್ತಿದ್ದು, ಈ ಎರಡು ಹಾವುಗಳಿಗೆ ಇಂದು ಜಲಾಭಿಷೇಕ ನೆರವೇರಿಸಿ ಆರತಿ ಬೆಳಗುವ ಮೂಲಕ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಈ ಸಂದರ್ಭ ಗೋವರ್ಧನ್ ಭಟ್ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.