main logo

ನಟಿ ರಮ್ಯ ಸಾವಿನ ಸುದ್ದಿ – ಗೊಂದಲವೋ? ಕಿಡಿಗೇಡಿಗಳ ಕೃತ್ಯವೋ..?

ನಟಿ ರಮ್ಯ ಸಾವಿನ ಸುದ್ದಿ – ಗೊಂದಲವೋ? ಕಿಡಿಗೇಡಿಗಳ ಕೃತ್ಯವೋ..?

ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ಸಿನಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಬಂದಿತ್ತು, ಅದೇನಂದ್ರೆ ಒಂದು ಕಾಲದ ಸ್ಟಾರ್ ನಟಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕಿ ರಮ್ಯ ದಿವ್ಯಸ್ಪಂದನಾ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂಬ ಸುದ್ದಿ!

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ಕ್ಷಣಾರ್ಧದಲ್ಲಿ ವೈರಲ್ ಆದ ಈ ಸುದ್ದಿ ಕೆಲಕಾಲ ಎಲ್ಲರನ್ನೂ ತಬ್ಬಿಬ್ಬುಗೊಳ್ಳುವಂತೆ ಮಾಡಿತ್ತು.

ಆದರೆ ಅದೃಷ್ಟವಶಾತ್ ಸ್ವಲ್ಪ ಹೊತ್ತಿನಲ್ಲೇ ಇದೊಂದು ‘ಸುಳ್ಸುದ್ದಿ’ ಎಂದು ಕನ್ಫರ್ಮ್ ಆದ್ಮೇಲೆ ರಮ್ಯ ಅಭಿಮಾನಿಗಳು ಸೇರಿದಂತೆ ಎಲ್ಲರೂ ನಿಟ್ಟುಸಿರುಬಿಟ್ಟರು.

ನಿಜವಾಗ್ಲೂ ಆಗಿದ್ದೇನಂದ್ರೆ, ರಮ್ಯ ಎಂಬ ಹೆಸರಿನ ತಮಿಳು ನಟಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆಂದು ಹೇಳಲಾಗುತ್ತಿದ್ದು, ಅವರ ಫೊಟೋ ಬಳಸುವಲ್ಲಿ ಕನ್ನಡದ ನಟಿ ರಮ್ಯ ಅವರ ಫೊಟೋವನ್ನು ಯಾರೋ ಎಡವಟ್ಟು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇ ಈ ಎಲ್ಲಾ ಅವಾಂತರಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ, ಯಾರೋ ಕಿಡಿಗೇಡಿಗಳು ಬೇಕೆಂದೇ ಸೋಷಿಯಲ್ ಮೀಡಿಯಾದಲ್ಲಿ ಈ ಸುಳ್ಳು ಸುದ್ದಿಯನ್ನು ಹಬ್ಬಿಸಿ ಮಜಾ ತೆಗೆದುಕೊಂಡಿರಬಹುದೆಂಬ ಸಂಶಯವೂ ಇದೀಗ ಕಾಡುತ್ತಿದೆ.


ಒಟ್ಟಿನಲ್ಲಿ ಒಂದು ಕಾಲದ ಮೋಹಕ ತಾರೆಯ ಹಠಾತ್ ನಿಧನದ ಸುದ್ದಿ ಕೆಲಕಾಲ ಎಲ್ಲರನ್ನೂ ಶಾಕ್ ಗೆ ತಳ್ಳಿದ್ದು ಮಾತ್ರ ಸುಳ್ಳಲ್ಲ.

ಅಂದಹಾಗೆ ರಮ್ಯ ಅವರು ಸದ್ಯ ಯುರೋಪ್ ಪ್ರವಾಸದಲ್ಲಿದ್ದು, ಇಲ್ಲಿರುವ ಅವರ ಆಪ್ತರು ರಮ್ಯ ಅವರಿಗೆ ಪೋನ್ ಮಾಡಿ ವಿಷಯ ತಿಳಿಸುವವರೆಗೆ ಅವರಿಗೆ ಈ ವಿಚಾರವೇ ಗೊತ್ತಿರಲಿಲ್ಲವಂತೆ.

ರಮ್ಯಾ ಅವರು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಆರಾಮಾಗಿದ್ದಾರೆ. ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಮಾರುಕಟ್ಟೆ ವಿಶ್ಲೇಷಕ ಹಾಗೂ ಚಿತ್ರ ವಿಮರ್ಶಕ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ.

ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಅವರೂ ಸಹ ಈ ಬಗ್ಗೆ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದು, ನಟಿ ಯಾವ ಸಮಸ್ಯೆಯೂ ಇಲ್ಲದೆ ಆರಾಮಾಗಿದ್ದಾರೆ. ನಾನು ಈಗಷ್ಟೇ ಅವರೊಂದಿಗೆ ಮಾತನಾಡಿದೆ ದಿವ್ಯ ಸ್ಪಂದನಾ ಚೆನ್ನಾಗಿದ್ದಾರೆ. ನಾಳೆ ಪ್ರೇಗ್ ನಗರಕ್ಕೆ ಮತ್ತು ನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಎಂದು ದೃಢಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!