main logo

ಕೋಳಿ ಅಂಕಕ್ಕೆ ಪೊಲೀಸ್ ದಾಳಿ – ನಗದು ಸಹಿತ ಕೋಳಿಗಳು ವಶಕ್ಕೆ

ಕೋಳಿ ಅಂಕಕ್ಕೆ ಪೊಲೀಸ್ ದಾಳಿ – ನಗದು ಸಹಿತ ಕೋಳಿಗಳು ವಶಕ್ಕೆ

ಕಾರ್ಕಳ : ಕಾರ್ಕಳ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆತ್ತೊಟ್ಟು ಎಂಬಲ್ಲಿ ಮಾ. 2ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ನಗದು, ವಾಹನ ಸಹಿತ ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕೋಳಿ ಅಂಕ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭ ಅಲ್ಲಿ ಸೇರಿದ್ದ ಜನರು ಓಡಿ ಹೋಗಿರುತ್ತಾರೆ. ಉದಯ ಎಂಬಾತನನ್ನು ಹಿಡಿದು ವಿಚಾರಿಸಿದಾಗ ಓಡಿ ಹೋದವರು ಸತೀಶ, ಜಯ, ಗಣೇಶ, ಉಮೇಶ, ಸುರೇಶ ಮತ್ತಿತರು ಇದ್ದ ವಿಚಾರ ತಿಳಿದುಬಂದಿರುತ್ತದೆ.

ಜೂಜಾಟಕ್ಕೆ ಬಳಸಿದ 3 ಕೋಳಿಗಳು, 900 ರೂ. ಹಣ ಮತ್ತು 4 ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿರುತ್ತದೆ.

Related Articles

Leave a Reply

Your email address will not be published. Required fields are marked *

error: Content is protected !!