main logo

ಪ್ಲೀಸ್‌ ನಿನ್ನ ಧ್ವನಿ 2 ನಿಮಿಷ ಕೇಳಬೇಕೆಂದು ಫೋನ್ ಮಾಡಿ ಪತಿ ಸೂಸೈಡ್‌

ಪ್ಲೀಸ್‌ ನಿನ್ನ ಧ್ವನಿ 2 ನಿಮಿಷ ಕೇಳಬೇಕೆಂದು ಫೋನ್ ಮಾಡಿ ಪತಿ ಸೂಸೈಡ್‌

ಮುಂಬೈ: ಪತ್ನಿ ಗಲಾಟೆ ಮಾಡಿದ್ದಕ್ಕೆ ಮನನೊಂದ ಪತಿರಾಯನೊಬ್ಬ ಆಕೆಗೆ ಫೋನ್ ಮಾಡಿ 2 ನಿಮಿಷ ಆಕೆಯ ಧ್ವನಿ ಕೇಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಡೊಂಬಿವಿಲಿ (Dombivali) ನಿವಾಸಿ ಸುಧಾಕರ್ ಯಾದವ್ ಹಾಗೂ ಪತ್ನಿ ಸಂಜನಾ ಯಾದವ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದರಿಂದ ಮನನೊಂದ ಸಂಜನಾ ಡಿಸೆಂಬರ್ 19ರಂದು ಪತಿ ಮನೆಯನ್ನು ಬಿಟ್ಟು ತನ್ನ ಸೋದರಿಯ ಮನೆಗೆ ಹೋಗಿದ್ದಾಳೆ.

ಘಟನೆ ನಡೆದ ಮರುದಿನ, ಡಿಸೆಂಬರ್ 20ರಂದು ಬೆಳಗ್ಗೆ 10 ಗಂಟೆಗೆ ಸಂಜನಾಗೆ ಫೋನ್ ಮಾಡಿದ ಸುಧಾಕರ್ ನನಗೆ ಎರಡು ನಿಮಿಷ ನಿನ್ನ ವಾಯ್ಸ್ ಕೇಳಬೇಕು ಅನಿಸ್ತಿದೆ ಎಂದು ಹೇಳಿದ್ದಾನೆ. ಈ ವೇಳೆ ಸಂಜನಾ ಕುರ್ಲಾಗೆ ಕೆಲಸಕ್ಕಾಗಿ ತೆರಳುತ್ತಿದ್ದಳು. 2 ನಿಮಿಷ ಮಾತನಾಡಿದ ಬಳಿಕ ಸುಧಾಕರ್ ಫೋನ್ ಕಾಲ್ (Phone Call) ಕಟ್ ಮಾಡಿದ್ದ. ನಂತರ ವಾಟ್ಸಪ್‌ನಲ್ಲಿ ಪತಿ ಆತ್ಮಹತ್ಯೆಗೆ ಸಿದ್ಧನಾಗಿ ನಿಂತಿರೋ ಫೋಟೋ ಕಳಿಸಿದ್ದ ಎಂದು ಸಂಜನಾ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ

Related Articles

Leave a Reply

Your email address will not be published. Required fields are marked *

error: Content is protected !!