main logo

ಶ್ರೀನಿವಾಸ ಹುಲಕೋಟಿ ಗೆ ಪಿಹೆಚ್.ಡಿ. ಪದವಿಯಲ್ಲಿ ಚಿನ್ನದ ಪದಕ

ಶ್ರೀನಿವಾಸ ಹುಲಕೋಟಿ ಗೆ ಪಿಹೆಚ್.ಡಿ. ಪದವಿಯಲ್ಲಿ ಚಿನ್ನದ ಪದಕ

ಶಿವಮೊಗ್ಗ: ಶಿವಮೊಗ್ಗದ ಕೆಳದಿ ಶಿವಪ್ಪನಾಯಾಕ ಕೃಷಿ ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಾದ ಶ್ರೀನಿವಾಸ ಹೆಚ್. ಹುಲಕೋಟಿ ಅವರಿಗೆ ಬೀದರ್ ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು 16ನೇ ಅಕ್ಟೋಬರ್ ದಂದು ನಡೆದ 13ನೇ ಘಟಿಕೋತ್ಸವದಲ್ಲಿ ಪಿಹೆಚ್.ಡಿ. ಪದವಿಗೆ ಚಿನ್ನದ ಪದಕ ನೀಡಿ ಗೌರವಿಸಿದೆ.

ಇವರು ಈ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಮತ್ಸ್ಯ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದಲ್ಲಿ ಡಾ|| ಎಸ್. ಆರ್. ಸೋಮಶೇಖರ ರವರ ಮಾರ್ಗದರ್ಶನದಲ್ಲಿ ನಡೆಸಿದ ಸಂಶೋಧನಾ ವಿಷಯ ” ಉಡುಪಿ ಕರಾವಳಿಯಲ್ಲಿ ಟ್ರಾಲ್ ಬೈಕ್ಯಾಚ್ ಬಳಕೆಯ ಮೌಲ್ಯಮಾಪನ ” ಎಂಬ ಮಹಾಪ್ರಬಂಧ ಮಂಡಿಸಿದ್ದರು.

ಶ್ರೀನಿವಾಸ ಹೆಚ್. ಹುಲಕೋಟಿ ರವರು ಪಿಹೆಚ್.ಡಿ. ಪದವಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಕ್ಕೆ ಚಿನ್ನದ ಪದಕ ಲಭಿಸಿದೆ.

ಕರ್ನಾಟಕದ ಘನವೆತ್ತ ರಾಜ್ಯಪಾಲ ಮತ್ತು ಕುಲಾಧಿಪತಿಯೂ ಆದ ಥಾವರ್ ಚಂದ್ ಗೆಹ್ಲೋಟ್ ರವರು ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ಪಶುಸಂಗೋಪನೆ ಸಚಿವ ಮತ್ತು ಅಪಾರ ಕುಲಪತಿ ಯಾದ ಕೆ. ವೆಂಕಟೇಶ್ , ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಡಾ|| ಅಗರ್ವಾಲ್ ಹಾಗೂ ವಿಶ್ವವಿದ್ಯಾಲಯದ ಕುಲಪತಿ ಡಾ|| ಕೆ.ಸಿ. ವೀರಣ್ಣ ರವರು ಉಪಸ್ಥಿತರಿದ್ದರು.

ಶ್ರೀನಿವಾಸ್ ಹೆಚ್. ಹುಲಕೋಟಿ ಯವರು ಗದಗ ಜಿಲ್ಲೆಯ ನರೇಗಲ್ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ. ಇವರು, ಈ ಹಿಂದೆ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆಸಲ್ಲಿಸಿರುವರು. ಇವರು ನರೇಗಲ್ ಗ್ರಾಮದ ನಿವಾಸಿಗಳಾದ ದಿ|| ಹನುಮಂತಪ್ಪ ಹುಲಕೋಟಿ ಮತ್ತು ದಿ|| ಲಕ್ಷ್ಮಿ ದೇವಿ ಹುಲಕೋಟಿ ದಂಪತಿಗಳ ಕೊನೆಯ ಪುತ್ರ.
ಇವರ ಈ ಸಾಧನೆಗೆ ಅಣ್ಣ-ಅತ್ತಿಗೆ, ಅಕ್ಕ-ಭಾವ, ಮಡದಿ ಡಾ|| ಪರಿಣಿತ ಮತ್ತು ಮಗಳು ಕು|| ನಿಯತಿ ಇವರುಗಳ ಪ್ರೋತ್ಸಾಹ‌ ಹಾಗೂ ಸಹಕಾರ ಈ ಸಾಧನೆಗೆ ಸಹಕಾರಿಯಾಗಿದೆ. ಆತ್ಮೀಯರಾದ ಬ್ರಹ್ಮಾವರದ ಛಾರ್ಟೆಡ್ ಇಂಜಿನಿಯರ್ ಪ್ರಜ್ವಲ್ ರಾವ್ ಮತ್ತು ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಪ್ರೊಫೆಸರ್ ಡಾ|| ಎ.ಟಿ. ರಾಮಚಂದ್ರ ನಾಯ್ಕ ರವರುಗಳ ನಿರಂತರ ಬೆಂಬಲ ಮತ್ತು ಪ್ರೋತ್ಸಾಹ ಈ ಗುರಿಮುಟ್ಟಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ, ಇವರ ಕುಟುಂಬದ ಇತರೆ ಸರ್ವ ಸದಸ್ಯರು, ಆತ್ಮೀಯ ಬಂಧುಗಳು, ಸ್ನೇಹಿತರು, ಗುರು-ಹಿರಿಯರು ಮತ್ತು ಸಹಪಾಠಿಗಳು ಅಭಿನಂದಿಸಿರುವರು.

Related Articles

Leave a Reply

Your email address will not be published. Required fields are marked *

error: Content is protected !!