Site icon newsroomkannada.com

ಪ್ರಿಯತಮೆಯರ ನಗ್ನ ಫೋಟೋ ಟೆಲಿಗ್ರಾಮ್‌ ಅಪ್ಲಿಕೇಶನ್‌ ಗೆ ಹಾಕುವ ವಿಕೃತ ಗ್ಯಾಂಗ್‌ ಬಯಲಿಗೆ

ಬೆಂಗಳೂರು: ಲೋಕದಲ್ಲಿ ಯಾವ ತರಹದ ಜನಗಳೆಲ್ಲ ಇರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನ್ನ ಪ್ರಿಯತಮೆಯ ಖಾಸಗಿ ಫೋಟೋವನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
ಮಾಡಿ ಬಳಿಕ ಆಕೆಯ ಜೊತೆಯೇ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ಯುವಕನನ್ನು ಆಗ್ನೇಯ ವಿಭಾಗ ಸೆನ್ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಅಂಜಯ್ (26) ಬಂಧಿತ ಆರೋಪಿ.

12 ಸ್ನೇಹಿತರಿಂದ ನೂರಕ್ಕೂ ಯುವತಿಯರ ನಗ್ನ ಫೋಟೋ ಅಪ್ಲೋಡ್‌: ಇನ್ನು ಬಂಧಿತ ಆರೋಪಿ ಜೊತೆಗೆ ಈತನ 12 ಜನ ಸ್ನೇಹಿತರು ಕೂಡ ಇದೇ ಮನಸ್ಸಿನವರು. ಇವರೆಲ್ಲ ಟೆಲಿಗ್ರಾಮ್​ನಲ್ಲಿ d3vil-official ಮತ್ತು discord ಎಂಬ ಹೆಸರಿನ ಗ್ರೂಪ್ ಮಾಡಿಕೊಂಡಿದ್ದರು. ಆ ಗ್ರೂಪ್​ನಲ್ಲಿ ತಮ್ಮ ತಮ್ಮ ಪ್ರಿಯತಮೆ, ಸ್ನೇಹಿತೆಯರ ನಗ್ನ ಫೋಟೋಗಳನ್ನು ಹಾಕುತ್ತಿದ್ದರು. ಹೀಗೆ ಸುಮಾರು ನೂರಕ್ಕು ಹೆಚ್ಚು ಯುವತಿಯರ ಫೋಟೋ ಶೇರ್ ಮಾಡಿದ್ದಾರೆ. ಅಲ್ಲದೇ @thediyahouse, @denofd3vil, @houseofd3vil, @heavenbyd3vil2 ಹೆಸರಿನ ಇನ್ಸ್ಟಾಗ್ರಾಮ್ ಖಾತೆ ತೆಗೆದು ಅದರಲ್ಲೂ ಅಪ್ಲೋಡ್ ಮಾಡಿದ್ದಾರೆ.

ಯುವತಿ ಆರೋಪಿ ಅಂಜಯ್ ಜೊತೆ ಮದುವೆ ಆಗಬೇಕು ಎಂಬ ಯೋಚನೆಯಲ್ಲಿದ್ದಾಗಲೇ ಆಕೆಗೆ ತನ್ನ ಪ್ರೀಮಿಯ ನವರಂಗಿ ಆಟ ಗೊತ್ತಾಗಿದೆ. ಅಂಜಯ್ ಹಾಗೂ ಯುವತಿ ಇಬ್ಬರೂ ಒಂದೇ ಊರಿನವರಾಗಿದ್ದರು. 10ನೇ ತರಗತಿಯಿಂದ ಒಟ್ಟಿಗೆ ಓದುತ್ತಿದ್ರು. ಬಿ.ಪ್ಲಾನಿಂಗ್ ಅನ್ನೋ ಕೋರ್ಸ್ ಮಾಡಿದ್ದ ಇವರು ನಂತರ ಬೆಂಗಳೂರಿಗೆ ಬಂದು ಒಟ್ಟಿಗೆ ವಾಸವಾಗಿದ್ದರು. ಇವರ ಮದುವೆಗೆ ಮನೆಯವರು ತಯಾರಿ ನಡೆಸಿದ್ದರು. ಆರೋಪಿ ವಿಚಾರಣೆ ವೇಳೆ ಆತನ ಮತ್ತಷ್ಟು ಕಾಮಕೃತ್ಯ ಬಯಲಾಗಿದ್ದು ಆರೋಪಿ BOT ಅನ್ನುವ ಅಪ್ಲಿಕೇಶನ್ ಡೆವಲಪ್ ಮಾಡ್ತಿದ್ದನಂತೆ. ಆ ಅಪ್ಲಿಕೇಶನ್​ನಲ್ಲಿ ಯಾರದ್ದೇ ಫೋಟೋ ಹಾಕಿದ್ರು ಬೆತ್ತಲೆಯಾಗಿ ತೋರಿಸುತ್ತಂತೆ. ಅದೇ ರೀತಿ ಸ್ನೇಹಿತೆ, ಸಂಬಂಧಿಕರ ಫೋಟೋ ಹಾಕಿ ಬೆತ್ತಲೆ ಚಿತ್ರ ನೋಡಿ‌ ವಿಚಿತ್ರ ಸುಖ ಪಡ್ತಿದ್ದ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ.

Exit mobile version