ಬೆಂಗಳೂರು, ನ.12: ಪರ್ಷಿಯನ್ ಬಿಳಿ ಬೆಕ್ಕು ಕಳ್ಳತನವಾಗಿದೆ. ಕೋರಮಂಗಲ 8ನೇ ಬ್ಲಾಕ್ಗೆ ಸ್ಕೂಟರ್ನಲ್ಲಿ ಎಂಟ್ರಿ ಕೊಟ್ಟಿದ್ದ ಇಬ್ಬರು ದುಷ್ಕರ್ಮಿಗಳು ಬಿಳಿ ಬಣ್ಣದ ಆರು ವರ್ಷದ ಪರ್ಷಿಯನ್ ಪಂಚ್ ಫೇಸ್ ಬೆಕ್ಕನ್ನು ಕದ್ದೊಯ್ದಿದ್ದಾರೆ. ಆರೋಪಿಗಳು ಬಿಲ್ಡಿಂಗ್ ಒಳಗೆ ನುಗ್ಗಿ ಬೆಕ್ಕನ್ನು ಕದ್ದಿದ್ದಾರೆ ಎಂದು 26 ವರ್ಷದ ಬೆಕ್ಕಿನ ಒಡತಿ ಅಶ್ವಿನಿ ಶಂಕರ್ ಪೂಜಾರಿ ಎಂಬುವವರು ದೂರು ದಾಖಲಿಸಿದ್ದಾರೆ.
ಅಶ್ವಿನಿ ಅವರು ವಾಸವಾಗಿರುವ ಎದುರಿನ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ನೋಡಿದಾಗ ಬೆಕ್ಕು ಕಳ್ಳತನವಾಗಿರುವುದು ತಿಳಿದಿದೆ. ಬೆಕ್ಕಿನ ಬೆಲೆ ಸುಮಾರು 15 ಸಾವಿರ ರೂಪಾಯಿ ಎಂದು ಮಾಲೀಕ ಅಶ್ವಿನಿ ಶಂಕರ್ ಪೂಜಾರಿ ಗುರುವಾರ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸೋಮವಾರ ರಾತ್ರಿ 9.30ರ ಸುಮಾರಿಗೆ ಬೆಕ್ಕು ಕಳ್ಳತನವಾಗಿದೆ ಎಂದು ಕೋರಮಂಗಲದ ಯೂನಿಯನ್ ಬ್ಯಾಂಕ್ ಎದುರು ವಾಸವಾಗಿರುವ ಅಶ್ವಿನಿ ತಿಳಿಸಿದ್ದಾರೆ. ಸದ್ಯ ಬೆಕ್ಕಿನ ಪತ್ತೆಗಾಗಿ ಪೋಲಿಸರ ಮೊರೆ ಹೋಗಿದ್ದು, ಬೆಕ್ಕಿನ ಚಿತ್ರವನ್ನು ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಲು ನಾವು ಕೆಲವು ಪ್ರಾಣಿ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.