ಪಠಾಣ್‌ಕೋಟ್: ಪಂಜಾಬ್‌ನಲ್ಲಿ ಗೂಡ್ಸ್ ರೈಲೊಂದು ಚಾಲಕನಿಲ್ಲದೇ ಸುಮಾರು 70 ಕಿಲೋಮೀಟರ್‌ಗಳವರೆಗೆ ಚಲಿಸಿದೆ. ಪಠಾಣ್‌ಕೋಟ್ ನಿಲ್ದಾಣದಲ್ಲಿ ರೈಲು ರೈಲು ನಿಲ್ದಾಣದಲ್ಲಿ ರೈಲು ಚಾಲಕ ರೈಲಿನಿಂದ ಇಳಿಯುವ ಮೊದಲು ಚಾಲಕ ಹ್ಯಾಂಡ್ ಬ್ರೇಕ್ ಹಾಕಲು ಮರೆತಿದ್ದ ಬಳಿಕ ರೈಲು ಸ್ಲೋಪಿ ಟ್ರ್ಯಾಕ್‌ನಲ್ಲಿ ಚಲಿಸಲು ಆರಂಭಿಸಿತು. ಕಲ್ಲಿದ್ದಲು ಹೊತ್ತು ಸಾಗುತ್ತಿದ್ದ ರೈಲು ಐದು ನಿಲ್ದಾಣಗಳನ್ನು ಚಾಲಕನಿಲ್ಲದೆ ದಾಟಿ ಸಾಗಿತ್ತು. ಬಳಿಕ ಉಚ್ಚಿ ಬಸ್ಸಿಯಲ್ಲಿ ರೈಲು ಅಧಿಕಾರಿಯೊಬ್ಬರು ಮರದ ದಿಮ್ಮಿಗಳನ್ನು ಅಡ್ಡವಾಗಿ ಇರಿಸಿ ರೈಲು ನಿಲ್ಲಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ರೈಲಿನ ವೀಡಿಯೊದಲ್ಲಿ ರೈಲು ನಿಲ್ದಾಣದ ಮೂಲಕ ಅತಿ ವೇಗದಲ್ಲಿ ಹಾದುಹೋಗುವುದನ್ನು ತೋರಿಸುತ್ತದೆ.
A driverless goods train traveled 78 KM from Kathua, Jammu and Kashmir, to Hoshiarpur, Punjab, where it was stopped with wooden stoppers. The incident occurred when the driver disembarked without applying the handbrake, prompting an investigation ordered by the Railway Minister. pic.twitter.com/KKSe3YsKIu
— Jist (@jist_news) February 25, 2024