main logo

ಅಯ್ಯೋ ಇದೆಂಥ ಅವ್ಯವಸ್ಥೆ: ಚಲಿಸುತ್ತಿದ್ದ ಬಸ್‌ನ ತಳಭಾಗ ಕುಸಿದು ರಸ್ತೆಗೆ ಬಿದ್ದ ಮಹಿಳೆ: ವಿಡಿಯೋ ನೋಡಿ

ಅಯ್ಯೋ ಇದೆಂಥ ಅವ್ಯವಸ್ಥೆ: ಚಲಿಸುತ್ತಿದ್ದ ಬಸ್‌ನ ತಳಭಾಗ ಕುಸಿದು ರಸ್ತೆಗೆ ಬಿದ್ದ ಮಹಿಳೆ: ವಿಡಿಯೋ ನೋಡಿ

ಚೆನ್ನೈ: ಚಲಿಸುತ್ತಿದ್ದ ಸರ್ಕಾರಿ ಬಸ್‌ನ ಸೀಟ್‌ ಕೆಳಗಿನ ತಳ ಕುಸಿದು ಮಹಿಳೆಯೊಬ್ಬರು ರಸ್ತೆಗೆ ಬಿದ್ದಿರುವ ಘಟನೆ ನಡೆದಿದೆ. ತಮಿಳುನಾಡಿನ ಚೆನ್ನೈಯಲ್ಲಿ ಈ ಆಫಾತಕಾರಿ ಘಟನೆ ಸಂಭವಿಸಿದ್ದು, ಮಹಿಳೆ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಮಂಗಳವಾರ (ಫೆಬ್ರವರಿ 6) ಸಾಯಂಕಾಲ ಚೆನ್ನೈ ತಿರುವಕ್ಕಾಡಿನಿಂದ ವಲ್ಲೂರ್‌ ನಗರಕ್ಕೆ ಸಾಗುವ ರೂಟ್‌ ನಂ. 59 ಸಿಟಿ ಬಸ್‌ನಲ್ಲಿ ಈ ಘಟನೆ ನಡೆದಿದೆ. 27 ವರ್ಷ ಮಹಿಳೆ ಈ ಬಸ್‌ನ ಕೊನೆಯ ಸೀಟ್‌ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಬಸ್‌ ಅಮಿಜಿಕರೈಗೆ ತಲುಪಿದಾಗ ಇದ್ದಕ್ಕಿದ್ದಂತೆ ಆ ಮಹಿಳೆ ಕುಳಿತಿದ್ದ ಸೀಟ್‌ನ ತಳಬಾಗ ಕುಸಿದು ದೊಡ್ಡದಾದ ರ‍ಂಧ್ರ ಉಂಟಾಗಿತ್ತು. ಈ ರಂಧ್ರದ ಮೂಲಕ ಮಹಿಳೆ ರಸ್ತೆಗೆ ಬಿದ್ದು ಬಿಟ್ಟರು. ಕೂಡಲೆ ಸಹ ಪ್ರಯಾಣಿಕರು ಎಚ್ಚೆತ್ತು ಬಸ್‌ ಚಾಲಕ ಮತ್ತು ನಿರ್ವಾಹಕರಿಗೆ ವಿಷಯ ತಿಳಿಸಿದರು. ಹೀಗಾಗಿ ಬಸ್‌ ನಿಲ್ಲಿಸಲಾಯಿತು. ಸಣ್ಣ ಪುಟ್ಟ ಗಾಯಕೊಂಡಿದ್ದ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ʼʼಬಸ್‌ ಚಾಲಕ ಶೀಘ್ರ ಕಾರ್ಯ ಪ್ರವೃತ್ತನಾಗಿ ಬಸ್‌ ನಿಲ್ಲಿಸಿದ್ದರಿಂದ ಸಂಭವಿಸಬಹುದಾದ ಬಹು ದೊಡ್ಡ ಆಪತ್ತಿನಿಂದ ಮಹಿಳೆಯನ್ನು ಪಾರು ಮಾಡಿದರುʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ವಿಷಯ ತಿಳಿದ ಕೂಡಲೇ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಘಟನೆಯ ಕೂಲಂಕುಷ ತನಿಖೆಗೆ ಸೂಚಿಸಿದ್ದಾರೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಬೇರೆ ಬಸ್‌ ತರಿಸಿ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಸದ್ಯ ಘಟನೆಯ ಬಗ್ಗೆ ಹಲವರು ಶಾಕ್‌ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!