Site icon newsroomkannada.com

ಬಾಯ್​ಫ್ರೆಂಡ್​ ಜತೆ ರಾತ್ರಿ ಪಾರ್ಟಿ..!, ತೀವ್ರ ಮಾದಕತೆಗೆ ಒಳಗಾದ ಬೆಳಗ್ಗೆ ಯುವತಿ ಎದ್ದೇಳಲೇ ಇಲ್ಲ

ಬಾಯ್​ಫ್ರೆಂಡ್​ ಜತೆ ಸೇರಿ ಮದ್ಯ ಸೇವಿಸಿದ ವಿದ್ಯಾರ್ಥಿನಿಯೊಬ್ಬಳು ಇನ್ನೆಂದೂ ಬಾರದ ಲೋಕಕ್ಕೆ ಪ್ರಯಾಣಿದ್ದಾಳೆ. ಡ್ರಗ್ಸ್​ನಿಂದ ಆಕೆಯ ಪ್ರಾಣ ಚೆಲ್ಲಿರಬಹುದೇ ಎಂಬ ಸಂಶಯ ಶುರುವಾಗಿ ಆಕೆಯ ಬಾಯ್​ಫ್ರೆಂಡ್​ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಿತಿ ಏಂಜೆಲ್​ (19) ಉಸಿರು ಚೆಲ್ಲಿದ ಯುವತಿಯೆಂದು ತಿಳಿದು ಬಂದಿದೆ.ಊಟಿಯ ಬಾಂಬೆ ಕ್ಯಾಸ್ಟ್ಲ್​ ಮೂಲದ ಬಾಯ್​ಫ್ರೆಂಡ್​ ಆಕಾಶ್​ (20)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆಕಾಶ್​ ತಂದೆ-ತಾಯಿ ಬೇರೆ ಬೇರೆ ವಾಸಿಸುತ್ತಿದ್ದರು. ಹೀಗಾಗಿ ಆತ ತನ್ನ ಅಜ್ಜಿಯ ಜತೆ ನೆಲೆಸಿದ್ದ. ಯುವತಿ ರಿತಿ, ಊಟಿಯ ಪಿಂಕರ್​ ಪೋಸ್ಟ್​ ಮೂಲದವಳು. ಊಟಿಯ ಖಾಸಗಿ ಶಾಲೆಯೊಂದರಲ್ಲಿ ಇಬ್ಬರು 10ನೇ ತರಗತಿಯವರೆಗೆ ಒಟ್ಟಿಗೆ ಓದಿದ್ದರು ಎನ್ನಲಾಗಿದೆ.

ಇವರಿಬ್ಬರ ನಡುವೆ ಆತ್ಮೀಯತೆ ಕೊನೆಗೆ ಪ್ರೀತಿಗೆ ತಿರುಗಿತ್ತು.ರಿತಿ ಏಂಜೆಲ್​ ಕೊಯಮತ್ತೂರಿನಲ್ಲಿರುವ ಖಾಸಗಿ ನರ್ಸಿಂಗ್​ ಕಾಲೇಜು ಸೇರಿದ್ದು ಕೆಲಸ ನಿರ್ವಹಿಸುತ್ತಿದ್ದಳು. ಆಕಾಶ್​ ನೀಲಗಿರಿಯಲ್ಲಿ ಖಾಸಗಿ ಇಂಜಿನಿಯರಿಂಗ್​ ಕಾಲೇಜು ಸೇರಿದನು. ಇಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಇದೇ ಭೇಟಿ ಇಬ್ಬರ ನಡುವಿನ ಪ್ರೀತಿಯನ್ನು ಮತ್ತಷ್ಟು ಬಲಪಡಿಸಿತು. ಹೀಗಿರುವಾಗ ಕಳೆದ ಶನಿವಾರ ಕಾಲೇಜಿಗೆ ರಜೆ ಇದ್ದ ಕಾರಣ ಗೆಳೆಯನ ಕೋರಿಕೆಯಂತೆ ಕೊಯಮತ್ತೂರಿನಿಂದ ರಿತಿ ಏಂಜೆಲ್ ಬಂದಿದ್ದಳು.

​ ರಿತಿಯನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಬರುವಾಗ ಇಬ್ಬರು ಆನ್‌ಲೈನ್‌ನಲ್ಲಿ ಊಟ ಬುಕ್ ಮಾಡಿ ಮನೆಗೆ ತಂದರು. ಇದಾದ ನಂತರ ಆಕಾಶ್ ಮತ್ತು ರಿತಿ ಏಂಜೆಲ್ ಮದ್ಯ ಸೇವಿಸಿದ್ದಾರೆ. ಬಳಿಕ ಮೋಟಾರ್​ ಬೈಕ್​​ನಲ್ಲಿ ಸಮೀಪದ ಪೈನ್ ಅರಣ್ಯ ಪ್ರದೇಶಕ್ಕೆ ತೆರಳಿ ಮ್ಯಾಜಿಕ್ ಮಶ್ರೂಮ್​ಗಳನ್ನು ತೆಗೆದುಕೊಂಡು ವೈನ್ ಸಮೇತ ತಿಂದಿದ್ದಾರೆ. ಇದರಿಂದ ಇಬ್ಬರೂ ತೀವ್ರ ಮಾದಕತೆಗೆ ಒಳಗಾಗಿ ನಿದ್ರೆಗೆ ಜಾರಿದ್ದಾರೆ.

ಬೆಳಗ್ಗೆ ಎಚ್ಚರಗೊಂಡ ಆಕಾಶ್, ರಿತಿ ಏಂಜೆಲ್ ಹಾಸಿಗೆಯಿಂದ ಏಳದಿರುವುದನ್ನು ಕಂಡು ಶಾಕ್ ಆಗಿದ್ದಾನೆ. ತಕ್ಷಣ ಆಕಾಶ್​ ಆಂಬ್ಯುಲೆನ್ಸ್​ಗಾಗಿ 108ಕ್ಕೆ ಕರೆ ಮಾಡಿದ್ದಾನೆ. ಪೊಲೀಸರು ಅನುಮಾನಾಸ್ಪದ ಕೊನೆಯುಸಿರು ಪ್ರಕರಣ ದಾಖಲಿಸಿಕೊಂಡು ಬಾಯ್​ಫ್ರೆಂಡ್​ ಆಕಾಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ರಿತಿ ಏಂಜೆಲ್ ಈ ಘಟನೆ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.

Exit mobile version