Site icon newsroomkannada.com

ಮಾರ್ಚ್‌ 5ರಂದು ಪಂಚಮುಖಿ ಗಾಯತ್ರಿ, ಗಣಪತಿ, ಆಂಜನೇಯ ಕ್ಷೇತ್ರದಲ್ಲಿ ಪ್ರತಿಷ್ಠಾ ಮಹೋತ್ಸವ

ಪುತ್ತೂರು: ದರ್ಬೆ ಪುತ್ತೂರು ಮರೀಲು ಕರಿಯಾಲ ರೈಲ್ವೇ ಗೇಟ್‌ ರಸ್ತೆಯ ಗಾಯತ್ರಿ ನಗರ ಪಂಚಮುಖಿ ಗಾಯತ್ರಿ, ಗಣಪತಿ, ಆಂಜನೇಯ ಕ್ಷೇತ್ರದಲ್ಲಿ ಪ್ರತಿಷ್ಠಾ ಮಹೋತ್ಸವ ಮಾರ್ಚ್‌ 5ರಂದು ನಡೆಯಲಿದೆ.
ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ ಮಾಘ ಯುಕ್ತ ಕುಂಭ ಮಾಸ ಕೃಷ್ಣ ಪಕ್ಷ ೨೧ ಸಲುವ, ತಾ. 05-03-2024ರ ಮಂಗಳವಾರದಂದು 12:30ರ ವೃಷಭ ಲಗ್ನದಲ್ಲಿ- ಶ್ರೀ ದೇವರ ಸನ್ನಿಧಿಯಲ್ಲಿ ವೇದಮೂರ್ತಿ ಪರಕ್ಕಜೆ ಶ್ರೀ ಅನಂತನಾರಾಯಣ ಭಟ್ ಅವರ ನೇತೃತ್ವದಲ್ಲಿ ಗಣಪತಿ ಯಜ್ಞ ಆಂಜನೇಯ ಯಜ್ಞ ಗಾಯತ್ರಿ ಯಜ್ಞ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಹೋತ್ಸವವು ಸಂಪನ್ನಗೊಳ್ಳಲಿದೆ.

ಮಾರ್ಚ್‌ 5ರಂದು ಬೆಳಗ್ಗೆ ಗಂಟೆ 08ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಕಲಶಾಭಿಷೇಕ ಬೆಳಗ್ಗೆ 9ರಿಂದ ಪಂಚಮುಖಿ ಗಣಪತಿ ಯಜ್ಞ, ಪಂಚಮುಖ ಆಂಜನೇಯ ಯಜ್ಞ, ಮಧ್ಯಾಹ್ನ 12ಕ್ಕೆ ಪಂಚಮುಖೀ ಗಾಯತ್ರಿ ಮಹಾಯಜ್ಞ ಪೂರ್ಣಾಹುತಿ, ಮಧ್ಯಾಹ್ನ ಗಂಟೆ 12:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಗಂಟೆ 07:30ಕ್ಕೆ : ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ ವಿತರಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಮಧ್ಯಾಹ 2:30ರಿಂದ ಸ್ವಪ್ನಲಕ್ಷ್ಮೀ ಬೆಂಗಳೂರು ಇವರಿಂದ ಕಥಕ್ ನೃತ್ಯ ಪ್ರದರ್ಶನವಿದೆ. ಪಾಂಚಜನ್ಯ ಯಕ್ಷ ಕಲಾವೃಂದ, ಪುತ್ತೂರು ಅವರಿಂದ
ಯಕ್ಷಗಾನ ಬಯಲಾಟ ‘ಶ್ರೀರಾಮ ದರ್ಶನ’ ನಡೆಯಲಿದೆ. ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶ್ವೇತಕುಮಾರ ಚರಿತ್ರೆ – ಯಕ್ಷಗಾನ ಬಯಲಾಟ ಪ್ರದರ್ಶನವಿದೆ.

Exit mobile version