ಹೈದರಾಬಾದ್: ಈ ಬಾರಿಯ ವಿಶ್ವಕಪ್ ಅಕ್ಟೋಬರ್ 5ರಂದು ಹೈದರಾಬಾದ್ ನಲ್ಲಿ ಆರಂಭವಾಗಲಿದೆ. ಅದಕ್ಕೂ ಮೊದಲು ಪಾಕಿಸ್ತಾನ ತಂಡ ಅಭ್ಯಾಸ ಪಂದ್ಯವನ್ನು ಸೆಪ್ಟೆಂಬರ್ 29 ರಂದು ಆಡಬೇಕಾಗಿದೆ. ಇದಕ್ಕಾಗಿ ಭಾರತದ ಬದ್ಧ ವೈರಿ ಪಾಕಿಸ್ತಾನದ ತಂಡವೂ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭವ್ಯ ಸ್ವಾಗತವನ್ನು ಕಂಡು ಸ್ವತಃ ಪಾಕ್ ಖುಷ್ ಆಗಿದ್ದು, ಆಟಗಾರರು ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಏಳು ವರ್ಷಗಳ ಬಳಿಕ ಪಾಕಿಸ್ತಾನ ತಂಡ ಕ್ರಿಕೆಟ್ ಪಂದ್ಯ ಆಡಲು ಭಾರತಕ್ಕೆ ಬಂದಿದ್ದು, ಇದಕ್ಕೂ ಮುನ್ನ 2016ರ ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ಬಂದಿತ್ತು. ಪಾಕಿಸ್ತಾನ ತಂಡ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಹಲವರು ಕ್ರಿಕೆಟಿಗರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದಲ್ಲದೆ, ಎಲ್ಲಾ ಆಟಗಾರರನ್ನು ತಂಡದ ಹೋಟೆಲ್ನಲ್ಲಿ ಭಾರತೀಯ ಶೈಲಿಯಲ್ಲಿ ಸ್ವಾಗತಿಸಲಾಯಿತು. ಅಲ್ಲದೆ ಆಟಗಾರರಿಗೆ ಕೇಸರಿ ಬಣ್ಣದ ಶಾಲುಗಳನ್ನು ಹೊದಿಸಿ ಸ್ವಾಗತಿಸಲಾಯಿತು. ನಾಯಕ ಬಾಬರ್ ಆಝಂ ಸೇರಿದಂತೆ ಹಲವು ಆಟಗಾರರು ಕೇಸರಿ ಶಾಲು ಧರಿಸಿರುವ ಕೆಲವು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
Welcome to India, Babar Azam and Team Pakistan.#BabarAzam𓃵 #PakistanCricketTeam pic.twitter.com/GCsuSjgobI
— Aarz-e-ishq (@Aarzaai_Ishq) September 28, 2023