main logo

ಸರಕಾರಿ ಹಿರಿಯ ಪ್ರಾಥಮಿಕ ಪಡುಕೋಣೆ ಶಾಲೆ ವಾರ್ಷಿಕೋತ್ಸವ

ಸರಕಾರಿ ಹಿರಿಯ ಪ್ರಾಥಮಿಕ ಪಡುಕೋಣೆ ಶಾಲೆ ವಾರ್ಷಿಕೋತ್ಸವ

ಕುಂದಾಪುರ:ಸರಕಾರಿ ಶಾಲೆಗಳ ಏಳಿಗೆಗೆ ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಪಾತ್ರ ಬಹಳ ಮುಖ್ಯವಾದದ್ದು ಶಾಲೆ ಮೇಲಿನ ಪ್ರೀತಿ ಹೆಚ್ಚಾದಾಗ ಮಾತ್ರ ಕನ್ನಡ ಶಾಲೆಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಹಳೆ ವಿದ್ಯಾರ್ಥಿಗಳ ಸಂಘ ಕೋಟೆಗುಡ್ಡೆ (ಪಡುಕೋಣೆ ಶಾಲೆ) ಸಹಕಾರದಿಂದ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಪಡುಕೋಣೆ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಡುಕೋಣೆ ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ ಡಾ.ವಿಜಯಕೃಷ್ಣ ಅವರು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ರಾಜಕೀಯ ವಿಚಾರವನ್ನು ಶಾಲೆಯಿಂದ ಹೊರಗೆ ಇಟ್ಟು ಊರಿನ ಶಾಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

 

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು.ಉದ್ಯಮಿಗಳಾದ ನಾಗರಾಜ.ಡಿ ಪಡುಕೋಣೆ,ಹರ್ಷ ಕಾಮತ್,ನಾಗೇಂದ್ರ ಹೆಬ್ಬಾರ್ ಪಟೇಲರಮನೆ ಹಡವು,ಎಸ್‍ಡಿಎಂಸಿ ಅಧ್ಯಕ್ಷ ದಿನೇಶ್ ಪೂಜಾರಿ,ವಿ.ವಿ ಪಡುಕೋಣೆ ರಮೇಶ ಬಂಗೇರ,ಸಂಜಯ.ಕೆ ಪೂಜಾರಿ,ಪಂಚಾಯಿತಿ ಸದಸ್ಯ ಸುಧಾಕರ ಶೆಟ್ಟಿ,ರಾಮಚಂದ್ರ ಹೆಬ್ಬಾರ್,ಸಿಆರ್‍ಪಿ ಮಂಜುನಾಥ ನಾಯ್ಕ್,ಶಿಕ್ಷಣ ಸಂಯೋಜಕ ಯೋಗೀಶ್,ನಾಗರಾಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ನಿವೃತ್ತ ಅಧ್ಯಾಪಕ ಸುಬ್ರಾಯ ಗಾಣಿಗ ಮತ್ತು ನಿವೃತ್ತ ಸೈನಿಕರಾದ ದಿನೇಶ್ ಆಚಾರ್ಯ,ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಕಸ್ತೂರಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಶಿಕ್ಷಕರಾದ ಸರಿಟಾ ಪಾಯಸ್,ದೀಪಾ ಶೆಟ್ಟಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.ವಿಶ್ವನಾಥ ಪಡುಕೋಣೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕರಾದ ಮಾಲತಿ ಆಚಾರ್ಯ,ಪ್ರಶಾಂತ ನಿರೂಪಿಸಿದರು.ಅಶೋಕ ಶೆಟ್ಟಿ ಸಂಸಾಡಿ ಬಹುಮಾನ ವಿತರಿಸಿದರು.ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರವೀಣ ಪಡುಕೋಣೆ ವಂದಿಸಿದರು.ಶಾಲಾ ವಿದ್ಯಾರ್ತಿಗಳಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.

Related Articles

Leave a Reply

Your email address will not be published. Required fields are marked *

error: Content is protected !!