main logo

ಅಫ್ಘಾನಿಸ್ಥಾನದಲ್ಲಿ ಭೂಕಂಪನದ ಪರಿಣಾಮ ಘೋರ : ಆಹಾರ-ಔಷಧಕ್ಕೆ ಸಂತ್ರಸ್ತರ ಪರದಾಟ!

ಅಫ್ಘಾನಿಸ್ಥಾನದಲ್ಲಿ ಭೂಕಂಪನದ ಪರಿಣಾಮ ಘೋರ  : ಆಹಾರ-ಔಷಧಕ್ಕೆ ಸಂತ್ರಸ್ತರ ಪರದಾಟ!

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪನದಿಂದ 2,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಆಡಳಿತವು ಭಾನುವಾರ ತಿಳಿಸಿದೆ. ವಿಪತ್ತುಗಳ ಸಚಿವಾಲಯದ ವಕ್ತಾರ ಜನನ್ ಸಯೀಕ್ ರಾಯಿಟರ್ಸ್‌ಗೆ ನೀಡಿದ ಸಂದೇಶದಲ್ಲಿ 2,445 ಮಂದಿ ಸತ್ತಿದ್ದಾರೆ ಎಂದು ಹೇಳಿದ್ದಾರೆ.

ಗಾಯಗೊಂಡವರ ಸಂಖ್ಯೆ “2,000 ಕ್ಕಿಂತ ಹೆಚ್ಚು” ಎಂದು ಹೇಳಿದ್ದಾರೆ. 1,320 ಮನೆಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ಸಯೀಕ್ ಹೇಳಿದ್ದಾರೆ. ಹತ್ತು ರಕ್ಷಣಾ ತಂಡಗಳು ಇರಾನ್ ಗಡಿಯಲ್ಲಿರುವ ಪ್ರದೇಶದಲ್ಲಿವೆ ಎಂದು ಸಯೀಕ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಭೂಕಂಪನ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಹೆರಾತ್‌ನ ಮುಖ್ಯ ಆಸ್ಪತ್ರೆಯ ಹೊರಗೆ ಬೆಡ್‌ಗಳನ್ನು ಹಾಕಿರುವ ಫೋಟೋಗಳು ಜಾಲತಾಣಗಳಲ್ಲಿ ಹರಡಿದೆ. ಆಹಾರ, ಕುಡಿಯುವ ನೀರು, ಔಷಧಿ, ಬಟ್ಟೆ ಮತ್ತು ಡೇರೆಗಳು ತುರ್ತಾಗಿ ಅಗತ್ಯವಿದೆ ಎಂದು ಕತಾರ್‌ನ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಸುಹೇಲ್ ಶಾಹೀನ್ ಮಾಧ್ಯಮಗಳಿಗೆ ಸಂದೇಶದಲ್ಲಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಆರೋಗ್ಯ ವ್ಯವಸ್ಥೆಯು ಸಂಪೂರ್ಣವಾಗಿ ವಿದೇಶಿ ನೆರವಿನ ಮೇಲೆ ಅವಲಂಬಿತವಾಗಿದೆ, ತಾಲಿಬಾನ್  ಅಧಿಕಾರ ವಹಿಸಿಕೊಂಡ ನಂತರದ ಎರಡು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೆರವು ದೊರೆತಿಲ್ಲ. ಅಲ್ಲದೆ ಅಂತಾರಾಷ್ಟ್ರೀಯ ಸಹಕಾರವೂ ದೊರೆಯದ ಕಾರಣ ಸಮಸ್ಯೆ ಉಲ್ಬಣವಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!