Site icon newsroomkannada.com

ಸಮಾನ ನಾಗರಿಕ ಸಂಹಿತೆ ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಿ: ಸಿಟಿ ರವಿ

Opponents of Equal Civil Code go to Pakistan: CT Ravi

ಉಡುಪಿ: ಜಿನ್ನಾ ಮಾನಸಿಕತೆ ಹೊಂದಿರೋರು ಸಮಾನ ನಾಗರಿಕ ಸಂಹಿತೆ ವಿರೋಧಿಸುತ್ತಾರೆ. ಈ ದೇಶದಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ ಒಂದೇ ಅಲ್ವಾ. ಪ್ರತ್ಯೇಕ ಬೇಕು ಎನ್ನುವರಿಗೆ ದೇಶ ಕೊಟ್ಟಿದ್ದೇವೆ. ಪ್ರತ್ಯೇಕ ಕಾನೂನು ಬೇಕು ಅನ್ನೋರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.

ಉಡುಪಿಯಲ್ಲಿಂದು ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಬಿಜೆಪಿ ಬರದಿದ್ದರೆ ದೇಶ ಕಳೆದುಕೊಳ್ಳುತ್ತೇವೆ. ತುಕ್ಡೇ ಗ್ಯಾಂಗ್ ಗಳು ಮೋದಿಯನ್ನು ಸೋಲಿಸಲು ಹವಣಿಸುತ್ತಿದೆ. ಕಾಂಗ್ರೆಸ್ ಟೂಲ್ ಕಿಟ್ ಪಾಲಿಟಿಕ್ಸ್  ಮಾಡುತ್ತಿದೆ ಎಂದು ದೂರಿದರು. ಕಾಂಗ್ರೆಸ್ ಔರಂಗಜೇಬನ ಮಾನಸಿಕ ಸ್ಥಿತಿ ಹೊಂದಿದೆ. ಆತ ಲಕ್ಷಾಂತರ ಜನರನ್ನು ಬಲಾತ್ಕಾರದ ಮತಾಂತರ ಮಾಡಿದ. ಔರಂಗಜೇಬನಿಗೂ ಕಾಂಗ್ರೆಸ್ ನವರಿಗೂ ಯಾವುದೇ ವ್ಯತ್ಯಾಸವಿಲ್ಲ. ಔರಂಗಜೇಬ ಬದುಕಿಲ್ಲ. ಆದರೆ, ಆತನ ವಿಚಾರವನ್ನು ಕಾಂಗ್ರೆಸ್ ಜೀವಂತವಾಗಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

Exit mobile version