Site icon newsroomkannada.com

ಕೊಕ್ಕರ್ಣೆ ಭಾಗದ ಸರಕಾರಿ ಉದ್ಯೋಗಾಕಾಂಕ್ಷಿಗಳಿಗೊಂದು ಗುಡ್ ನ್ಯೂಸ್!

(Representative Image Used)

ಕೊಕ್ಕರ್ಣೆ: ಪಿಯು ಮತ್ತು ಪದವಿ ಮುಗಿಸಿ ಸರಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಕೊಕ್ಕರ್ಣೆ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜಾಬ್ ಆಕಾಂಕ್ಷಿಗಳಿಗೊಂದು ಗುಡ್ ನ್ಯೂಸ್ ಇಲ್ಲಿದೆ.

ಸರಕಾರಿ ಉದ್ಯೋಗಗಳಿಗಾಗಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್ ಲೈನ್ ತರಬೇತಿಯನ್ನು ಕೊಕ್ಕರ್ಣೆ ಗ್ರಾಮ ಪಂಚಾಯತ್ ನಲ್ಲಿ ಏರ್ಪಡಿಸಲಾಗಿದೆ.

ಅಕ್ಟೋಬರ್ 04, ಬುಧವಾರದಿಂದ ಈ ತರಗತಿಗಳು ಪ್ರಾರಂಭವಾಗಲಿದ್ದು, ಗ್ರಾಮೀಣ ಭಾಗದ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಇದೊಂದು ಸುವರ್ಣವಕಾಶವಾಗಿದೆ.

ಹಾಗಾಗಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಕೊಕ್ಕರ್ಣೆ  ಗ್ರಾಮ ಪಂಚಾಯತ್ ಕಛೇರಿಯನ್ನು ಸಂಪರ್ಕಿಸುವಂತೆ ಪಂಚಾಯತ್ ಪ್ರಕಟನೆ ತಿಳಿಸಿದೆ.

ವಿದ್ಯಾರ್ಥಿಗಳೂ ಕೂಡ ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದ್ದು, ತರಬೇತಿಯು ಪ್ರತೀದಿನ ಸಾಯಂಕಾಲ 5.30 ರಿಂದ ರಾತ್ರಿ 7.00 ಗಂಟೆಯವರೆಗೆ ನಡೆಯಲಿದೆ.

Exit mobile version