main logo

ಅಮೆಜಾನ್‌ನಲ್ಲಿ ಕ್ಯಾಮೆರಾ ಲೆನ್ಸ್‌ ಆರ್ಡರ್‌ ಮಾಡಿದ್ದವರಿಗೆ ಡೆಲಿವರಿಯಾಗಿದ್ದು ಕಿನೋವಾ ಬೀಜ

ಅಮೆಜಾನ್‌ನಲ್ಲಿ ಕ್ಯಾಮೆರಾ ಲೆನ್ಸ್‌ ಆರ್ಡರ್‌ ಮಾಡಿದ್ದವರಿಗೆ ಡೆಲಿವರಿಯಾಗಿದ್ದು ಕಿನೋವಾ ಬೀಜ

ಬೆಂಗಳೂರು: ಆನ್‌ ಲೈನ್‌ ಶಾಪಿಂಗ್‌ ನಲ್ಲಿ ದಿನದಿಂದ ದಿನಕ್ಕೆ ಮೋಸದಾಟ ಹೆಚ್ಚುತ್ತಿದೆ.  ಇದೀಗ ಅಮೇಝಾನ್​ನಿಂದ ರೂ. 90,000 ಕ್ಯಾಮೆರಾ ಲೆನ್ಸ್​ ಅನ್ನು ಆರ್ಡರ್​ ಮಾಡಿದ ಒಬ್ಬರಿಗೆ ಲೆನ್ಸ್ ಬದಲಾಗಿ ಕಿನೋವಾ ಬೀಜಗಳು ತಲುಪಿವೆ. ಅರುಣಕುಮಾರ್ ಮೆಹೆರ್​ ಎಂಬುವವರು ತಾವು ಮೋಸ ಹೋದ ಬಗೆಯನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ.

ನಾನು ಅಮೇಝಾನ್​ನಿಂದ 90K INR ಕ್ಯಾಮೆರಾ ಲೆನ್ಸ್ ಆರ್ಡರ್ ಮಾಡಿದೆ. ಆದರೆ ಲೆನ್ಸ್​ ಬಾಕ್ಸಿನೊಳಗೆ ಕಿನೋವಾ ಬೀಜಗಳ (Quinoa Seeds) ​ಪ್ಯಾಕೆಟ್ ಕಳುಹಿಸಲಾಗಿದೆ. ಅಮೇಝಾನ್​ ಮತ್ತು ಎಪ್ಪಾರಿಯೋ ರೀಟೇಲ್​ನ ದೊಡ್ಡ ಸ್ಕ್ಯಾಮ್​ ಇದು ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅರುಣಕುಮಾರ್​ ಜು. 5ರಂದು ಅಮೇಝಾನ್​ನಿಂದ ಸಿಗ್ಮಾ 24/70 F 2.8 ಲೆನ್ಸ್​ ಆರ್ಡರ್​ ಮಾಡಿದ್ದರು. ಆದ ಸಮಸ್ಯೆಯನ್ನು ಅವರು ಅಮೇಝಾನ್​ಗೆ ಟ್ಯಾಗ್​ ಮಾಡಿ ಟ್ವೀಟ್ ಮಾಡಿದ್ದರು. ಅಮೇಝಾನ್​ ಈ ಬಗ್ಗೆ ತನಿಖೆ ನಡೆಸುತ್ತಿದೆ ಪ್ರತಿಕ್ರಿಯಿಸಿದೆಯಾದರೂ, ಅರುಣಕುಮಾರ್, ಲೆನ್ಸ್​ ಕಳುಹಿಸಿ ಇಲ್ಲವೆ ಹಣವನ್ನು ಮರುಪಾವತಿಸಿ ಎಂದು ಮರುಟ್ವೀಟ್ ಮಾಡಿದ್ದಾರೆ. ಜು.7ರಂದು ಮಾಡಿದ ಈ ಟ್ವೀಟ್ ಅನ್ನು 1.3 ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸುಮಾರು 300 ಜನರು ರೀಟ್ವೀಟ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!